ಬೆಂಗಳೂರು: ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯ ಸಿಬ್ಬಂದಿ ನೇಮಕಾತಿ ಮತ್ತು ಸೇವಾ ನಿಯಮಗಳಿಗೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. 1977ರ ಹಳೆಯ ನಿಯಮಗಳನ್ನು ರದ್ದುಗೊಳಿಸಿ, ಹೊಸದಾಗಿ ‘ಕರ್ನಾಟಕ ರಾಜ್ಯ ಕಂದಾಯ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು 2026’ ಅನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ. ಈ ಕುರಿತು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ರಾಜ್ಯಪತ್ರದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಹೊಸ ನಿಯಮಾವಳಿಗಳ ಪ್ರಕಾರ, ಕಂದಾಯ ಇಲಾಖೆಯ ವಿವಿಧ ವೃಂದಗಳಲ್ಲಿ ಒಟ್ಟು 22,655 ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಇಲಾಖೆಯ ಆಡಳಿತ ಯಾಂತ್ರಿಕತೆಗೆ ಹೊಸ ಚೈತನ್ಯ ನೀಡಲು ಸರ್ಕಾರ ಮುಂದಾಗಿದೆ.
ಪ್ರಮುಖ ಹುದ್ದೆಗಳು ಮತ್ತು ನೇಮಕಾತಿ ವಿಧಾನ
ತಹಶೀಲ್ದಾರ್ ಗ್ರೇಡ್-1 (310 ಹುದ್ದೆಗಳು): ಈ ಹುದ್ದೆಗಳನ್ನು ತಹಶೀಲ್ದಾರ್ ಗ್ರೇಡ್-2 ವೃಂದದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಹಿರಿತನದ ಆಧಾರದ ಮೇಲೆ 100% ಬಡ್ತಿ ಮೂಲಕ ಭರ್ತಿ ಮಾಡಲಾಗುತ್ತದೆ.
· ತಹಶೀಲ್ದಾರ್ ಗ್ರೇಡ್-2
(370 ಹುದ್ದೆಗಳು): ಶೇಕಡಾ 50 ರಷ್ಟು ಹುದ್ದೆಗಳನ್ನು ಕೆ.ಪಿ.ಎಸ್.ಸಿ (KPSC) ನಡೆಸುವ ಗೆಜೆಟೆಡ್ ಪ್ರೊಬೆಷನರ್ಸ್ ಸ್ಪರ್ಧಾತ್ಮಕ
ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಉಳಿದ ಶೇ. 50 ರಷ್ಟು ಹುದ್ದೆಗಳನ್ನು ಶಿರಸ್ತೇದಾರ್/ಉಪ ತಹಶೀಲ್ದಾರ್ ವೃಂದದಿಂದ ಬಡ್ತಿ ಮೂಲಕ ತುಂಬಲಾಗುತ್ತದೆ.
·
ಗ್ರಾಮ ಆಡಳಿತಾಧಿಕಾರಿ (VAO - 9,843 ಹುದ್ದೆಗಳು): ಇಲಾಖೆಯಲ್ಲೇ ಅತಿ ಹೆಚ್ಚು ಹುದ್ದೆಗಳನ್ನು
ಹೊಂದಿರುವ ವೃಂದ ಇದಾಗಿದ್ದು, ಇವುಗಳನ್ನು ಕೆ.ಇ.ಎ (KEA) ಅಥವಾ ಕೆ.ಪಿ.ಎಸ್.ಸಿ ಮೂಲಕ ಸ್ಪರ್ಧಾತ್ಮಕ
ಪರೀಕ್ಷೆ ನಡೆಸಿ ಮೆರಿಟ್ ಆಧಾರದ ಮೇಲೆ 100% ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸಾದವರು ಇದಕ್ಕೆ ಅರ್ಹರಾಗಿರುತ್ತಾರೆ.
ಆಯ್ಕೆಯಾದ ನಂತರ 6 ತಿಂಗಳ ತರಬೇತಿ ಕಡ್ಡಾಯವಾಗಿದೆ.
· ಪ್ರಥಮ ದರ್ಜೆ ಸಹಾಯಕರು (FDA) / ಕಂದಾಯ ನಿರೀಕ್ಷಕರು
(RI) (2,881 ಹುದ್ದೆಗಳು): ಶೇ. 30 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಶೇ. 70 ರಷ್ಟು ಹುದ್ದೆಗಳನ್ನು ಎಸ್ಡಿಎ ಮತ್ತು ಗ್ರಾಮ ಆಡಳಿತಾಧಿಕಾರಿಗಳ
ಜಂಟಿ ಹಿರಿತನದ ಆಧಾರದ ಮೇಲೆ ಬಡ್ತಿ ಮೂಲಕ ಭರ್ತಿ ಮಾಡಲಾಗುತ್ತದೆ.
·
ದ್ವಿತೀಯ ದರ್ಜೆ ಸಹಾಯಕರು (SDA - 3,037 ಹುದ್ದೆಗಳು): ಶೇ. 75 ರಷ್ಟು ಹುದ್ದೆಗಳನ್ನು ಪಿಯುಸಿ ವಿದ್ಯಾರ್ಹತೆಯ ಮೇಲೆ ನೇರ ನೇಮಕಾತಿ ಮೂಲಕ ಮತ್ತು ಶೇ. 25 ರಷ್ಟು ಹುದ್ದೆಗಳನ್ನು
ಗ್ರೂಪ್-ಡಿ ಸಿಬ್ಬಂದಿಗೆ ಬಡ್ತಿ ನೀಡುವುದರ ಮೂಲಕ ತುಂಬಲಾಗುತ್ತದೆ.
· ಗ್ರೂಪ್-ಡಿ ಸಿಬ್ಬಂದಿ (2,618 ಹುದ್ದೆಗಳು): ಈ ಹುದ್ದೆಗಳನ್ನು
ಎಸ್ಎಸ್ಎಲ್ಸಿ (SSLC) ವಿದ್ಯಾರ್ಹತೆಯ
ಆಧಾರದ ಮೇಲೆ ನೇರ ನೇಮಕಾತಿ ನಿಯಮಗಳನ್ವಯ ಭರ್ತಿ ಮಾಡಲಾಗುತ್ತದೆ.
ಹಳೆಯ
ನಿಯಮ ರದ್ದು:
ಹೊಸ ನಿಯಮಗಳ ಜಾರಿಯೊಂದಿಗೆ, 1977ರ ‘ಕರ್ನಾಟಕ ಸಾಮಾನ್ಯ ಸೇವೆಗಳು (ಕಂದಾಯ ಅಧೀನ ಶಾಖೆ) (ವೃಂದ ಮತ್ತು ನೇಮಕಾತಿ) ನಿಯಮಗಳು’ ಇನ್ಮುಂದೆ ರದ್ದಾಗಲಿವೆ. ಆದರೆ, ಈ ಹಿಂದೆ ಹಳೆಯ ನಿಯಮದಡಿ ಪಡೆದ ಹಕ್ಕುಗಳು, ಕೈಗೊಂಡ ಕ್ರಮಗಳು ಅಥವಾ ಹೊಣೆಗಾರಿಕೆಗಳಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಹೊಸ ನಿಯಮಾವಳಿಗಳು ಪ್ರಕಟಗೊಂಡ ದಿನಾಂಕದಿಂದಲೇ
ಜಾರಿಗೆ ಬಂದಿದ್ದು, ಮುಂಬರುವ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮತ್ತು ಬಡ್ತಿ ಪ್ರಕ್ರಿಯೆಗಳಿಗೆ ದಾರಿ ಸುಗಮಗೊಳಿಸಲಿದೆ.
No comments:
Post a Comment