ನಮ್ಮ ಬಗ್ಗೆ:
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ, ಯಾವುದೇ ನೌಕರರ ವೃತ್ತಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕ್ರಮಗಳು, ಸಲಹೆಗಳನ್ನು ನೀಡುವುದರ ಮೂಲಕ ಎಲ್ಲರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಲಾಭರಹಿತ ಸಂಘವಾಗಿದ್ದು, ರಾಜ್ಯದ ಎಲ್ಲಾ PDO ಹುದ್ದೆಗಳನ್ನು ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳಿಗೆ ಅನುಗುಣವಾ̧ಗಿ ಉನ್ನತೀಕರಿಸುವುದರ ಮೂಲಕ ಗ್ರಾಮೀಣಾಭಿವೃದ್ಧಿಯಲ್ಲಿ PDO ಅವರನ್ನು ತೊಡಗಿಸುವ ಮಹತ್ತರ ಗುರಿಯೊಂದಿಗೆ ಕೆಲಸ ಮಾಡುತ್ತಿದೆ.
ಈ ಸಂಘವು ಕಳೆದ ಒಂದುವರೇ ವರ್ಷದಿಂದ ಸಾಕಷ್ಟು PDO ಅವರ ವೃತ್ತಿ ಸಂಬಂಧಿತ ಸಮಸ್ಯೆಗಳ ಕುರಿತು ಕಾಳಜಿವಹಿಸುತ್ತಿದ್ದು, PDO ಹುದ್ದೆಯನ್ನು ಗ್ರೂಪ್ -B ಯನ್ನಾಗಿ ಉನ್ನತೀಕರಿಸುವ ಗುರಿ
ಯನ್ನು ಹೊಂದಿದೆ.
ಪ್ರಸ್ತುತ ರಾಜ್ಯದಲ್ಲಿ ಅತೀ ಹೆಚ್ಚು PDO ಸದಸ್ಯರನ್ನು ಹೊಂದಿದ ಸಂಘವಾಗಿದೆ, ಇದರ ಕೇಂದ್ರ ಕಛೇರಿಯ ಬೆಂಗಳೂರಿನ ಮಾರುತಿನಗರದಲ್ಲಿದ್ದು, 31 ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರನ್ನು ಹೊಂದಿದೆ.
No comments:
Post a Comment