LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

27 April 2026

KTTP ಟೆಂಡರ್ ಅವಧಿ ಮಾರ್ಗಸೂಚಿಗಳ

KTTP ಟೆಂಡರ್ ಮಾರ್ಗಸೂಚಿಗಳು

📅 ಮುಂಚಿತ ಯೋಜನೆ

ಕ್ರಿಯಾಯೋಜನೆ ಅನುಮೋದನೆಯಾದ ತಕ್ಷಣವೇ ಸರಕು ಮತ್ತು ಸೇವೆಗಳ ಲಭ್ಯತೆಗಾಗಿ ಸಾಕಷ್ಟು ಮುಂಚಿತವಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವುದು ಕಡ್ಡಾಯ.

⚡ ಅಲ್ಪಾವಧಿ ಟೆಂಡರ್

ತುರ್ತು ಸಂದರ್ಭಗಳಲ್ಲಿ ಸೂಕ್ತ ಕಾರಣ ದಾಖಲಿಸಿ ಕನಿಷ್ಠ 07 ದಿನಗಳ ಅಲ್ಪಾವಧಿ ಟೆಂಡರ್ ಕರೆಯಲು ನಿಯಮದಂತೆ ಅವಕಾಶವಿರುತ್ತದೆ.

⏳ ಕಡ್ಡಾಯ ಟೆಂಡರ್

ಮೂರು ವಾರಕ್ಕಿಂತ ಹೆಚ್ಚು ಕಾಲಾವಕಾಶವಿರುವ ಎಲ್ಲಾ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಟೆಂಡರ್ ಮೂಲಕವೇ ಸಂಗ್ರಹಣೆ ಮಾಡತಕ್ಕದ್ದು.

✅ ಕಲಂ 4(ಜಿ) ವಿನಾಯಿತಿ ನಿಯಮಗಳು:
  • ವಿಶೇಷ ಮತ್ತು ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಮಾತ್ರ ಈ ವಿನಾಯಿತಿಗೆ ಅವಕಾಶವಿದೆ.
  • ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸ್ವತಃ ತಯಾರಿಸುವ ಸರಕುಗಳಿಗೆ ಮಾತ್ರ ವಿನಾಯಿತಿ ನೀಡಬಹುದು.
  • ಎಲ್ಲಾ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಮೂಲಕವೇ ಸಲ್ಲಿಸಬೇಕು.

🚫 ಆಚರಣೆಗಳು

ಸ್ವಾತಂತ್ರ್ಯ ದಿನಾಚರಣೆ, ದಸರಾ ಮುಂತಾದ ನಿಗದಿತ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲಾಗುವುದಿಲ್ಲ.

🚫 ಕಾಮಗಾರಿಗಳು

ಸಿವಿಲ್ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ನೇರ 4(ಜಿ) ವಿನಾಯಿತಿ ನೀಡಲು ಅವಕಾಶವಿರುವುದಿಲ್ಲ.

🚫 ಶಿಸ್ತು ಕ್ರಮ

ಉಲ್ಲಂಘನೆಯಾದಲ್ಲಿ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ (Service Book) ಶಿಸ್ತು ಕ್ರಮದ ಬಗ್ಗೆ ನಮೂದಿಸಲಾಗುವುದು.

🎲 ಮೀಸಲಾತಿ ಮತ್ತು ಆಯ್ಕೆ:
  • 1 ಕೋಟಿ ರೂ. ವರೆಗಿನ ಕೆಲಸಗಳಲ್ಲಿ SC/ST ಮತ್ತು 2A ವರ್ಗಗಳಿಗೆ Randomization ಕಡ್ಡಾಯ.
  • ಇ-ಪೋರ್ಟಲ್ ತಂತ್ರಾಂಶದ ಮೂಲಕವೇ ಮೀಸಲಾತಿಯನ್ನು ಕಡ್ಡಾಯವಾಗಿ ನಿಗದಿಪಡಿಸಬೇಕು.
  • ಹಿಂದಿನ ಆಯ್ಕೆ ಮುಕ್ತಾಯಗೊಂಡ ರೋಸ್ಟರ್ ಬಿಂದುವಿನಿಂದಲೇ ಮುಂದಿನ ಆಯ್ಕೆ ಮುಂದುವರೆಯಬೇಕು.

No comments:

Post a Comment