ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಇನ್ನು ಮುಂದೆ ಕಾಮಗಾರಿ ಟೆಂಡರ್‌ಗಳನ್ನು ಕರೆಯುವಾಗ GST ಮೊತ್ತವನ್ನು ಹೊರತುಪಡಿಸಿ ಪ್ರಕ್ರಿಯೆ ನಡೆಸುವಂತೆ ಆರ್ಥಿಕ ಇಲಾಖೆಯು ಮಹತ್ವದ ಸೂಚನೆ ನೀಡಿದೆ
ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಅವರು ಆಗಸ್ಟ್ 9, 2024 ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ
PDOಗಳು ಮತ್ತು ಸಂಗ್ರಹಣಾ ಪ್ರಾಧಿಕಾರಗಳು ಗಮನಿಸಬೇಕಾದ ಪ್ರಮುಖಾಂಶಗಳು:
ಅಂದಾಜು ಪಟ್ಟಿ (Estimate): UniSR ಅನ್ವಯ ಅಂದಾಜು ಪಟ್ಟಿ ತಯಾರಿಸುವಾಗ GST ಮೊತ್ತವನ್ನು ಪ್ರತ್ಯೇಕವಾಗಿ ತೋರಿಸಬೇಕು
. ಇದನ್ನು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಲೆಕ್ಕಹಾಕಲು DPAR (e-Gov) ಗೆ ಸೂಚಿಸಲಾಗಿದೆ . ಟೆಂಡರ್ ಮೊತ್ತ (Amount put to tender): ಟೆಂಡರ್ ಆಹ್ವಾನಿಸುವಾಗ GST ಮೊತ್ತವನ್ನು ಹೊರತುಪಡಿಸಿದ ಮೊತ್ತಕ್ಕೆ ಮಾತ್ರ ಟೆಂಡರ್ ಕರೆಯಬೇಕು
. L1 ನಿರ್ಧಾರ: ಗುತ್ತಿಗೆದಾರರು ಸಲ್ಲಿಸುವ ದರಗಳನ್ನು (GST ಹೊರತುಪಡಿಸಿ) ಟೆಂಡರ್ ಮೊತ್ತಕ್ಕೆ ಹೋಲಿಸಿ ಕಡಿಮೆ ದರ ನಮೂದಿಸಿದವರನ್ನು (L1) ನಿರ್ಧರಿಸಲಾಗುವುದು
. EMD ಮತ್ತು ಭದ್ರತಾ ಠೇವಣಿ: ಗುತ್ತಿಗೆದಾರರಿಂದ ಪಡೆಯುವ EMD, ಕಾರ್ಯಕ್ಷಮತೆ ಗ್ಯಾರಂಟಿ (Performance Guarantee) ಮತ್ತು ಭದ್ರತಾ ಠೇವಣಿಗಳನ್ನು (Security Deposit) ಕೇವಲ GST ರಹಿತ ಟೆಂಡರ್ ಮೊತ್ತದ ಆಧಾರದ ಮೇಲೆ ಲೆಕ್ಕಹಾಕಬೇಕು
. ಆಡಳಿತಾತ್ಮಕ ಅನುಮೋದನೆ: ಟೆಂಡರ್ ಮೊತ್ತ ಮತ್ತು GST ಮೊತ್ತ ಸೇರಿದ ಒಟ್ಟು ಮೊತ್ತವು ಆಡಳಿತಾತ್ಮಕ ಅನುಮೋದನೆ (Admin Approval) ನೀಡಿದ ಮೊತ್ತವನ್ನು ಮೀರದಂತೆ ಸಂಗ್ರಹಣಾ ಪ್ರಾಧಿಕಾರಗಳು ಎಚ್ಚರ ವಹಿಸಬೇಕು
. ಒಪ್ಪಂದ (Agreement): ಗುತ್ತಿಗೆದಾರರೊಂದಿಗೆ ಮಾಡಿಕೊಳ್ಳುವ ಒಪ್ಪಂದದಲ್ಲಿ ಕಾಮಗಾರಿ ಮೊತ್ತ ಮತ್ತು GST ಮೊತ್ತವನ್ನು ಪ್ರತ್ಯೇಕವಾಗಿಯೇ ನಮೂದಿಸಬೇಕು
.
ವಿಶೇಷ ಸೂಚನೆ: ಒಪ್ಪಂದದ ಅವಧಿಯಲ್ಲಿ GST ದರಗಳು ಬದಲಾದಲ್ಲಿ, ಪರಿಷ್ಕೃತ ದರದಂತೆ ಪಾವತಿ ಅಥವಾ ಹಿಂಪಾವತಿ ಮಾಡಲು ಸರ್ಕಾರ ಮತ್ತು ಗುತ್ತಿಗೆದಾರರು ಬದ್ಧರಾಗಿರಬೇಕು ಎಂಬ ಅಂಶವನ್ನು ಕಡ್ಡಾಯವಾಗಿ ಒಪ್ಪಂದದಲ್ಲಿ ಸೇರಿಸಲು ತಿಳಿಸಲಾಗಿದೆ
ಈ ಹೊಸ ನಿಯಮವು ಟೆಂಡರ್ ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಮತ್ತು ಪಾರದರ್ಶಕತೆ ತರಲು ಸಹಕಾರಿಯಾಗಲಿದೆ
No comments:
Post a Comment