12 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಬಳಕೆಯಲ್ಲಿರುವ ಭೂಮಿ ಸ್ವಯಂಚಾಲಿತವಾಗಿ ರಾಜ್ಯ ಸರ್ಕಾರದ ಹೆಸರಿಗೆ ಸೇರಲಿದೆ.
ಕರ್ನಾಟಕ ಸರ್ಕಾರವು ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ಅಧಿನಿಯಮ, 2026 ಅನ್ನು ಜಾರಿಗೆ ತಂದಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಏಪ್ರಿಲ್ 8, 2026ರಂದು ಈ ಕಾಯ್ದೆಗೆ ಅನುಮತಿ ನೀಡಿದ್ದು, ಏಪ್ರಿಲ್ 9ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ.
![]() |
| Ai ಆಧಾರಿತ ಚಿತ್ರ |
ಕಾಯ್ದೆಯ ಪ್ರಮುಖ ಅಂಶಗಳು
- ನೋಂದಾಯಿತ ವರ್ಗಾವಣೆ ದಾಖಲೆ ಇಲ್ಲದಿದ್ದರೂ, ದಾನಿಯ ಮರಣ ಆಗಿದ್ದರೂ ಅಥವಾ ಆಸ್ತಿ ವರ್ಗಾವಣೆ ಕಾಯ್ದೆಯ ಉಪಬಂಧಗಳ ಪಾಲನೆ ಇಲ್ಲದಿದ್ದರೂ ನಿಹಿತ ಮಾನ್ಯ.
- 12 ವರ್ಷಗಳಿಗಿಂತ ಹೆಚ್ಚು ಕಾಲ ಆಕ್ರಮಣ ಮುಂದುವರಿದ ಭೂಮಿಯ ಮೇಲಿನ ಯಾವುದೇ ಹಕ್ಕು ಪ್ರತಿಪಾದಿಸಿ ನ್ಯಾಯಾಲಯ ಅಥವಾ ನ್ಯಾಯಮಂಡಳಿಯಲ್ಲಿ ಮೊಕದ್ದಮೆ ಹಾಕಲು ನಿರ್ಬಂಧ.
- ಕಾಯ್ದೆ ಜಾರಿಗೆ ಬಂದ ದಿನದಿಂದ 30 ದಿನಗಳ ಒಳಗೆ ಆಕ್ಷೇಪ ಸಲ್ಲಿಸಲು ನೋಂದಾಯಿತ ಹಕ್ಕು ದಾಖಲೆ ಹೊಂದಿರುವವರಿಗೆ ಅವಕಾಶ.
- ದೂರು ನಿವಾರಣಾ ಪ್ರಾಧಿಕಾರ — ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿ ರಚಿತ ಕಂದಾಯ ನ್ಯಾಯಾಲಯ.
- ದೂರು ನಿವಾರಣಾ ಪ್ರಾಧಿಕಾರದ ತೀರ್ಮಾನದ ವಿರುದ್ಧ 30 ದಿನಗಳಲ್ಲಿ ಕರ್ನಾಟಕ ಅಪೀಲು ನ್ಯಾಯಮಂಡಳಿಗೆ ಮೇಲ್ಮನವಿ ಸಾಧ್ಯ.
- ಬ್ಲಾಕ್ ಶಿಕ್ಷಣ ಅಧಿಕಾರಿ (BEO) ಮತ್ತು ಡಿಡಿಪಿಯು ಅಧಿಕಾರಿಗಳು ಎಸ್ಟೇಟ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಕಾಯ್ದೆ ರಾಜ್ಯ ಸರ್ಕಾರವು ಅಧಿಸೂಚನೆ ಮೂಲಕ ನಿಗದಿಪಡಿಸುವ ದಿನಾಂಕದಂದು ಜಾರಿಗೆ ಬರಲಿದ್ದು, ಕಾಯ್ದೆ ಜಾರಿಯ ಎರಡು ವರ್ಷಗಳ ನಂತರ ಯಾವುದೇ ತೊಂದರೆ ನಿವಾರಣೆ ಆದೇಶ ಹೊರಡಿಸಲು ಅವಕಾಶ ಇರುವುದಿಲ್ಲ.
ಮೂಲ: ಕರ್ನಾಟಕ ರಾಜ್ಯಪತ್ರ, ಭಾಗ – IVA, ಸಂ. 267, ದಿನಾಂಕ 09.04.2026

No comments:
Post a Comment