LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

11 April 2026

ಗಂಗಾವತಿ: ಅಖಂಡ ತಾಲೂಕು ಸಂಘ ರಚನೆ; ಅಧ್ಯಕ್ಷರಾಗಿ ಶಂಷೀರ್, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಸಂಕನಾಳ್ ಆಯ್ಕೆ

ಗಂಗಾವತಿ: ತಾಲೂಕಿನಲ್ಲಿ ಸಂಘಟನಾತ್ಮಕ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಅಖಂಡ ಗಂಗಾವತಿ ತಾಲೂಕು ಸಂಘವನ್ನು ಅಧಿಕೃತವಾಗಿ ರಚಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ಶಂಷೀರ್  ಅಲಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಂಘದ ರಚನೆಗಾಗಿ ಶ್ರಮಿಸಿದ ಶಂಷೀರ್ ಅವರು ಮತ್ತು ಅವರ ತಂಡಕ್ಕೆ PDO ವಲಯ ಹಾಗೂ ಸಂಘದ ಸದಸ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ನೂತನ ಪದಾಧಿಕಾರಿಗಳ ವಿವರ:

ಸಂಘದ ವಿವಿಧ ಜವಾಬ್ದಾರಿಗಳಿಗೆ ಈ ಕೆಳಗಿನವರನ್ನು ಆಯ್ಕೆ ಮಾಡಲಾಗಿದೆ:

  • ತಾಲೂಕು ಅಧ್ಯಕ್ಷರು: ಶ್ರೀ ಶಂಷೀರ್ ಅಲಿ

  • ಪ್ರಧಾನ ಕಾರ್ಯದರ್ಶಿಗಳು: ಶ್ರೀ ಬಸವರಾಜ್ ಸಂಕನಾಳ್

  • ಖಜಾಂಚಿ: ಶ್ರೀ ಕೃಷ್ಣಪ್ಪ (ಹಿರಿಯರು)

  • ಗೌರವಾಧ್ಯಕ್ಷರು: ಶ್ರೀ ಮಲ್ಲಿಕಾರ್ಜುನ್ ಕಡಿವಾಳ (ಹಿರಿಯರು)

  • ಸಂಘಟನಾ ಕಾರ್ಯದರ್ಶಿಗಳು: ಶ್ರೀ ಲಕ್ಷ್ಮಣ್, ಶ್ರೀ ಜಿಲ್ಲಾನ್ ಪಾಷಾ, ಶ್ರೀಮತಿ ಭಾಗ್ಯಶ್ರೀ ಮೇಡಂ ಹಾಗೂ ಶ್ರೀಮತಿ ಶರಣಮ್ಮ ಮೇಡಂ.

ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸಂಘದ ಹಿತೈಷಿಗಳು "ತುಂಬು ಹೃದಯದ ಅಭಿನಂದನೆಗಳು" ಸಲ್ಲಿಸಿದ್ದು, ಸಂಘವು ಮುಂದಿನ ದಿನಗಳಲ್ಲಿ ಶಕ್ತಿಯುತವಾಗಿ ಬೆಳೆಯಲಿ ಎಂದು ಆಶಿಸಿದ್ದಾರೆ.

No comments:

Post a Comment