Menu Bar-1

Search Bar

Live updates

ತಾಜಾ ಸುದ್ದಿ
ಮಾಹಿತಿ ಲೋಡ್ ಆಗುತ್ತಿದೆ...

27 March 2026

ಗ್ರಾಮ ಪಂಚಾಯಿತಿ ಆಸ್ತಿ ಮತ್ತು ಕರಾರು ನಿಯಮಗಳು

ಗ್ರಾಮ ಪಂಚಾಯಿತಿ ಆಸ್ತಿ ಮತ್ತು ಕರಾರು ನಿಯಮಗಳು

• ಚರ ಸ್ವತ್ತು ವ್ಯವಹಾರ: ಗ್ರಾಮ ಪಂಚಾಯಿತಿಯು ಚರ ಸ್ವತ್ತು ಖರೀದಿಸಲು, ಮಾರಾಟ ಮಾಡಲು ಅಥವಾ ಗುತ್ತಿಗೆ ನೀಡಲು ಅದರ ಮೌಲ್ಯ ₹5,000 ಮೇಲಿದ್ದರೆ ತಾಲ್ಲೂಕು ಪಂಚಾಯಿತಿಯ ಪೂರ್ವಾನುಮೋದನೆ ಕಡ್ಡಾಯವಾಗಿದೆ.
• ಸ್ಥಿರ ಸ್ವತ್ತು ಆರ್ಜನೆ (ಪಡೆದುಕೊಳ್ಳುವುದು): ಗ್ರಾಮ ಪಂಚಾಯಿತಿಯು ₹25,000 ಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರ ಸ್ವತ್ತನ್ನು ಆರ್ಜನೆ ಮಾಡಲು (ಪಡೆದುಕೊಳ್ಳಲು) ತಾಲ್ಲೂಕು ಪಂಚಾಯಿತಿಯ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯ.
• ಸ್ಥಿರ ಸ್ವತ್ತು ವಿಲೇವಾರಿ: ಗ್ರಾಮ ಪಂಚಾಯಿತಿ ತನ್ನ ಸ್ಥಿರ ಸ್ವತ್ತನ್ನು ಮಾರಾಟ ಮಾಡಲು, ಗುತ್ತಿಗೆ ನೀಡಲು, ಅಡಮಾನ ಅಥವಾ ದಾನ ಮಾಡಲು ಸರ್ಕಾರದ ಅನುಮೋದನೆ ಕಡ್ಡಾಯವಾಗಿದೆ.
• ಕರಾರು ಪತ್ರಗಳು: ₹5,000 ಮೌಲ್ಯದ ಒಳಗಿನ ಕರಾರು ಪತ್ರಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರು ಅಧ್ಯಕ್ಷರ ಅನುಮೋದನೆ ಪಡೆದು ಬರೆದುಕೊಡಬಹುದು.

No comments:

Post a Comment