LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

26 January 2026

ರಾಷ್ಟ್ರೀಯ ಜಾನುವಾರು ಮಿಷನ್ (NLM)

ರಾಷ್ಟ್ರೀಯ ಜಾನುವಾರು ಮಿಷನ್ (NLM)

ಕೇಂದ್ರ ಸರ್ಕಾರದ 50% ಸಹಾಯಧನ ಯೋಜನೆ - ಮಾಹಿತಿ

ರಾಷ್ಟ್ರೀಯ ಜಾನುವಾರು ಮಿಷನ್ (NLM) ಯೋಜನೆಯು ಪಶುಸಂಗೋಪನೆ ಇಲಾಖೆಯ ಮೂಲಕ ರೈತರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಜಾರಿಗೆ ತರಲಾಗಿದೆ.

ಯಾರಿಗೆ ಎಷ್ಟು ಸಹಾಯಧನ ಸಿಗುತ್ತದೆ?

ಘಟಕದ ಹೆಸರು ಗರಿಷ್ಠ ಸಹಾಯಧನ (ಸಬ್ಸಿಡಿ)
ಕುರಿ ಮತ್ತು ಮೇಕೆ ಸಾಕಾಣಿಕೆ ₹50 ಲಕ್ಷದವರೆಗೆ (50%)
ಕೋಳಿ ಸಾಕಾಣಿಕೆ (Poultry) ₹25 ಲಕ್ಷದವರೆಗೆ (50%)
ಹಂದಿ ಸಾಕಾಣಿಕೆ ₹30 ಲಕ್ಷದವರೆಗೆ (50%)
ಮೇವು ಅಭಿವೃದ್ಧಿ (ಸೈಲೇಜ್/ಬ್ಲಾಕ್) ₹50 ಲಕ್ಷದವರೆಗೆ (50%)

ಅರ್ಹತೆಗಳು ಮತ್ತು ಷರತ್ತುಗಳು

  • ವೈಯಕ್ತಿಕ ರೈತರು, SHG, FPO ಮತ್ತು ಸಹಕಾರಿ ಸಂಘಗಳು ಅರ್ಹರು.
  • ಸೊಂತ ಅಥವಾ ಕನಿಷ್ಠ 15 ವರ್ಷಗಳ ಗುತ್ತಿಗೆ ಜಮೀನು ಹೊಂದಿರಬೇಕು.
  • ಬ್ಯಾಂಕ್ ಸಾಲದ ಮಂಜೂರಾತಿ ಅಥವಾ ಸ್ವಂತ ಹಣ ಹೂಡಿಕೆಯ ಪುರಾವೆ ಇರಬೇಕು.
  • ಪಶುಸಂಗೋಪನೆಯಲ್ಲಿ ತರಬೇತಿ ಅಥವಾ ಅನುಭವದ ದಾಖಲೆ ಇರಬೇಕು.

ಅಗತ್ಯವಿರುವ ದಾಖಲೆ ಪಟ್ಟಿ

ಆಧಾರ್ ಕಾರ್ಡ್, ಫೋಟೋ ಮತ್ತು ಪ್ಯಾನ್ ಕಾರ್ಡ್.
ಬ್ಯಾಂಕ್ ಪಾಸ್‌ಬುಕ್ ಅಥವಾ ರದ್ದುಪಡಿಸಿದ ಚೆಕ್ (Cancelled Cheque).
ಜಮೀನಿನ ದಾಖಲೆಗಳು (RTC/Pahani).
ವಿವರವಾದ ಯೋಜನಾ ವರದಿ (Detailed Project Report - DPR).

ಗ್ರಾಮ ಪಂಚಾಯಿತಿಯ ಪಾತ್ರ

  • ಪ್ರಚಾರ: ಗ್ರಾಮ ಸಭೆಗಳ ಮೂಲಕ ಯೋಜನೆಯ ಅರಿವು ಮೂಡಿಸುವುದು.
  • ದಾಖಲೆ ದೃಢೀಕರಣ: ವಾಸಸ್ಥಳ ಮತ್ತು ಜಮೀನು ವಿವರಗಳನ್ನು ಪರಿಶೀಲಿಸುವುದು.
  • NOC: ಫಾರ್ಮ್ ಸ್ಥಾಪಿಸಲು ನಿರಪೇಕ್ಷಣಾ ಪತ್ರ ನೀಡುವುದು.
ಇಲ್ಲಿ ಅರ್ಜಿ ಸಲ್ಲಿಸಿ
ಸಹಾಯವಾಣಿ: 1800-180-1551 | ಇಲಾಖೆ: ಪಶುಸಂಗೋಪನೆ ಮತ್ತು ಹೈನುಗಾರಿಕೆ | ಮಾಹಿತಿ: ಕರ್ನಾಟಕ ರಾಜ್ಯ PDO ಬಿ ಗ್ರೇಡ್‌ ಹುದ್ದೆ ಉನ್ನತೀಕರಣ ಸಂಘ ತಯಾರಿಸಿದ ಮಾಹಿತಿ

No comments:

Post a Comment