✊ ಹೋರಾಟ ಮತ್ತು ನ್ಯಾಯ: ಪಿ.ಡಿ.ಓ ಶ್ರೀಮತಿ ಇಮ್ತಾಜ್ ಮತ್ತು ಸಂಘಟಿತ ಶಕ್ತಿಯ ಯಶೋಗಾಥೆ
ನೇಲೋಗಿ ಗ್ರಾಮ ಪಂಚಾಯಿತಿ | ಜೆವರ್ಗಿ ತಾಲ್ಲೂಕು|ಕಲಬುರ್ಗಿ ಜಿಲ್ಲೆ
ಇದು ಕೇವಲ ಒಬ್ಬ ಮಹಿಳಾ ಅಧಿಕಾರಿಯ ಹೋರಾಟವಲ್ಲ, ಬದಲಿಗೆ ಕರ್ತವ್ಯನಿಷ್ಠ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಸಂಘಟಿತ ಶಕ್ತಿಯ ವಿಜಯವಾಗಿದೆ. ಪಿ.ಡಿ.ಓ ಶ್ರೀಮತಿ ಇಮ್ತಾಜ್ ಮಹಮದಪುರ್ ಅವರ ಮೇಲಿನ ದೌರ್ಜನ್ಯದ ವಿರುದ್ಧ ಇಡೀ ರಾಜ್ಯದ ಸಂಘಟನೆಯು ಒಗ್ಗೂಡಿ ಜಯಗಳಿಸಿದ ಸ್ಫೂರ್ತಿದಾಯಕ ಕಥೆಯಿದು.
🛑
ಘಟನೆಯ ಹಿನ್ನೆಲೆ
ದಿನಾಂಕ 06.03.2026 ರಂದು ಕರ್ತವ್ಯದಲ್ಲಿದ್ದ ಇಮ್ತಾಜ್ ಅವರಿಗೆ ಆರೋಪಿ ನಿಂಗಣ್ಣ ಎಂಬುವವನು ಜೀವ ಬೆದರಿಕೆ ಹಾಗೂ ಕೊಲೆ ಬೆದರಿಕೆ ಹಾಕಿದ್ದನು. ಇದು ಇಡೀ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿತ್ತು.
🛡️ ಬೆನ್ನಿಗೆ ನಿಂತ ಸಂಘಟನೆ
🏆 ಹೋರಾಟಕ್ಕೆ ಸಂದ ಜಯ
- ✅ ರಾಜ್ಯದ:65 ತಾಲ್ಲೂಕುಗಳಿಂದಮನವಿ ಪತ್ರ ಸಲ್ಲಿಕೆ.
- ✅ ಆರೋಪಿ ನಿಂಗಣ್ಣನ: ಬಂಧನ.
- ✅ ಆರೋಪಿಯ: ಗನ್ ಲೈಸೆನ್ಸ್ ರದ್ದುಮಾಡುವಲ್ಲಿ ಸಂಘಟನೆಯ ಯಶಸ್ಸು.
"ನನ್ನ ಪ್ರಾಣಕ್ಕೆ ಸಂಚಕಾರ ಬಂದಾಗ, ನನ್ನ ಸಂಘಟನೆಯು ನನಗೆ ಆತ್ಮಸ್ಥೈರ್ಯ ತುಂಬಿತು. ಇದು ಸತ್ಯಕ್ಕೆ ಸಂದ ಜಯ. ನನ್ನ ಸಂಘಟನೆಗೆ ಅನಂತ ಕೋಟಿ ಪ್ರಣಾಮಗಳು."
- ಇಮ್ತಾಜ ಮಮದಾಪುರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಸ್ಥಳ: ಗ್ರಾಮ ಪಂಚಾಯತ್ ನೇದಲಗಿ | ಜೆವರ್ಗಿ ತಾಲ್ಲೂಕು

