LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

14 March 2026

PDO ಶ್ರೀಮತಿ ಇಮ್ತಾಜ್ ಅವರ ಪ್ರಕರಣದ ಯಶೋಗಾಥೆ

✊ ಹೋರಾಟ ಮತ್ತು ನ್ಯಾಯ: ಪಿ.ಡಿ.ಓ ಶ್ರೀಮತಿ ಇಮ್ತಾಜ್ ಮತ್ತು ಸಂಘಟಿತ ಶಕ್ತಿಯ ಯಶೋಗಾಥೆ

ನೇಲೋಗಿ ಗ್ರಾಮ ಪಂಚಾಯಿತಿ | ಜೆವರ್ಗಿ ತಾಲ್ಲೂಕು|ಕಲಬುರ್ಗಿ ಜಿಲ್ಲೆ

ಇದು ಕೇವಲ ಒಬ್ಬ ಮಹಿಳಾ ಅಧಿಕಾರಿಯ ಹೋರಾಟವಲ್ಲ, ಬದಲಿಗೆ ಕರ್ತವ್ಯನಿಷ್ಠ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಸಂಘಟಿತ ಶಕ್ತಿಯ ವಿಜಯವಾಗಿದೆ. ಪಿ.ಡಿ.ಓ ಶ್ರೀಮತಿ ಇಮ್ತಾಜ್ ಮಹಮದಪುರ್ ಅವರ ಮೇಲಿನ ದೌರ್ಜನ್ಯದ ವಿರುದ್ಧ ಇಡೀ ರಾಜ್ಯದ ಸಂಘಟನೆಯು ಒಗ್ಗೂಡಿ ಜಯಗಳಿಸಿದ ಸ್ಫೂರ್ತಿದಾಯಕ ಕಥೆಯಿದು.

🛑

ಘಟನೆಯ ಹಿನ್ನೆಲೆ

ದಿನಾಂಕ 06.03.2026 ರಂದು ಕರ್ತವ್ಯದಲ್ಲಿದ್ದ ಇಮ್ತಾಜ್ ಅವರಿಗೆ ಆರೋಪಿ ನಿಂಗಣ್ಣ ಎಂಬುವವನು ಜೀವ ಬೆದರಿಕೆ ಹಾಗೂ ಕೊಲೆ ಬೆದರಿಕೆ ಹಾಕಿದ್ದನು. ಇದು ಇಡೀ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿತ್ತು.

🛡️ ಬೆನ್ನಿಗೆ ನಿಂತ ಸಂಘಟನೆ
ನಾಯಕತ್ವ: ರಾಜ್ಯಾಧ್ಯಕ್ಷರಾದ ರಮೇಶ್ ನಡಿಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌ ಡಿ ಹಾಗೂ ರಾಜ್ಯ ನಿರ್ದೇಶಕಿ ರಾಜೇಶ್ವರಿ ಸಾಹು ಮೇಡಂ ಅವರ ದೃಢ ನಿರ್ಧಾರ.
ಮಹಿಳಾ ಶಕ್ತಿ: ರಾಜೇಶ್ವರಿ ಮೇಡಂ ಮತ್ತು ತಂಡದವರು ರಾತ್ರಿ 12 ಗಂಟೆಯವರೆಗೂ ಪೊಲೀಸ್ ಠಾಣೆಯ ಮುಂದೆ ನಿಂತು ಧೈರ್ಯ ತುಂಬಿದರು.

🏆 ಹೋರಾಟಕ್ಕೆ ಸಂದ ಜಯ

  • ✅ ರಾಜ್ಯದ:
    65 ತಾಲ್ಲೂಕುಗಳಿಂದ
    ಮನವಿ ಪತ್ರ ಸಲ್ಲಿಕೆ.
  • ✅ ಆರೋಪಿ ನಿಂಗಣ್ಣನ
    : ಬಂಧನ
    .
  • ✅ ಆರೋಪಿಯ
    : ಗನ್ ಲೈಸೆನ್ಸ್ ರದ್ದು 
    ಮಾಡುವಲ್ಲಿ ಸಂಘಟನೆಯ ಯಶಸ್ಸು.

"ನನ್ನ ಪ್ರಾಣಕ್ಕೆ ಸಂಚಕಾರ ಬಂದಾಗ, ನನ್ನ ಸಂಘಟನೆಯು ನನಗೆ ಆತ್ಮಸ್ಥೈರ್ಯ ತುಂಬಿತು. ಇದು ಸತ್ಯಕ್ಕೆ ಸಂದ ಜಯ. ನನ್ನ ಸಂಘಟನೆಗೆ ಅನಂತ ಕೋಟಿ ಪ್ರಣಾಮಗಳು."

- ಇಮ್ತಾಜ ಮಮದಾಪುರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಸ್ಥಳ: ಗ್ರಾಮ ಪಂಚಾಯತ್ ನೇದಲಗಿ | ಜೆವರ್ಗಿ ತಾಲ್ಲೂಕು

No comments:

Post a Comment