ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನ ಇನ್ನುಮುಂದೆ DBT ಮೂಲಕ ಪಾವತಿ:ರಾಜ್ಯ ಸರ್ಕಾರ.
ಹಂತ 1: ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಚೆಕ್ ಮಾಡುವುದು (UIDAI ಮೂಲಕ)
ವೇತನ ಪಾವತಿಗೂ ಮುಂಚೆ ನಿಮ್ಮ ಆಧಾರ್ ಕಾರ್ಡ್ ಯಾವುದಾದರೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎಂದು ತಿಳಿಯಲು ಈ ಕ್ರಮ ಅನುಸರಿಸಿ:
UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಭಾಷೆಯನ್ನು ಆಯ್ಕೆ ಮಾಡಿ
'My Aadhaar' ವಿಭಾಗದಲ್ಲಿ 'Bank Seeding Status' ಮೇಲೆ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಎಂಟ್ರಿ ಮಾಡಿ, 'Login with OTP' ನೀಡಿ
ಮೊಬೈಲ್‌ಗೆ ಬಂದ ಓಟಿಪಿ ದಾಖಲಿಸಿ ಲಾಗಿನ್ ಆದ ನಂತರ, 'Bank Seeding Status' ಆಪ್ಷನ್ ನೋಡಿ.
ಇಲ್ಲಿ ನಿಮ್ಮ ಆಧಾರ್ ಯಾವ ಬ್ಯಾಂಕ್‌ಗೆ ಮ್ಯಾಪ್ ಆಗಿದೆ ಎಂಬ ಮಾಹಿತಿ ಲಭ್ಯವಿರುತ್ತದೆ
ಹಂತ 2: NPCI ಮ್ಯಾಪಿಂಗ್ ಸ್ಟೇಟಸ್ ಪರಿಶೀಲನೆ
ನಿಮ್ಮ ವೇತನ ಬರುವ ಖಾತೆಗೆ (Salary Account) ಎನ್‌ಪಿಸಿಐ ಮ್ಯಾಪ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು:
NPCI (National Payments Corporation of India) ವೆಬ್‌ಸೈಟ್‌ಗೆ ಹೋಗಿ.
'Consumer' ಮೆನುವಿನಲ್ಲಿ 'Bharat Aadhaar Seeding Enabler (BASE)' ಮೇಲೆ ಕ್ಲಿಕ್ ಮಾಡಿ
'Aadhaar Mapped Status' ಆಯ್ಕೆ ಮಾಡಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಓಟಿಪಿ ನೀಡಿ ಪರಿಶೀಲಿಸಿ ಮ್ಯಾಪಿಂಗ್ ಬದಲಾಯಿಸುವುದು ಅಥವಾ ಹೊಸದಾಗಿ ಮಾಡುವುದು
ಒಂದು ವೇಳೆ ನಿಮ್ಮ ವೇತನದ ಖಾತೆ ಬಿಟ್ಟು ಬೇರೆ ಖಾತೆಗೆ ಮ್ಯಾಪ್ ಆಗಿದ್ದರೆ ಅಥವಾ ಯಾವುದಕ್ಕೂ ಮ್ಯಾಪ್ ಆಗದಿದ್ದರೆ ಹೀಗೆ ಮಾಡಿ:
ಹೊಸದಾಗಿ ಮ್ಯಾಪ್ ಮಾಡಲು: 'Aadhaar Seeding/De-seeding' ಆಪ್ಷನ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆ ನೀಡಿ, 'Seeding' ಮತ್ತು 'Fresh Seeding' ಆಯ್ಕೆ ಮಾಡಿಕೊಂಡು ನಿಮ್ಮ ವೇತನದ ಬ್ಯಾಂಕ್ ಹೆಸರನ್ನು ಸೆಲೆಕ್ಟ್ ಮಾಡಿ
ಒಂದು ಬ್ಯಾಂಕ್‌ನಿಂದ ಇನ್ನೊಂದಕ್ಕೆ ಬದಲಾಯಿಸಲು: ನಿಮ್ಮ ಸ್ಟೇಟಸ್‌ನಲ್ಲಿ ಹಳೆಯ ಬ್ಯಾಂಕ್ ತೋರಿಸುತ್ತಿದ್ದರೆ, 'Movement from one bank to another' ಆಯ್ಕೆ ಮಾಡಿ ಹೊಸ ಬ್ಯಾಂಕ್ ಖಾತೆ ವಿವರ ನೀಡಿ ಸಬ್ಮಿಟ್ ಮಾಡಿ
ನಂತರ ನಿಯಮ ಮತ್ತು ನಿಬಂಧನೆಗಳನ್ನು ಒಪ್ಪಿ (Agree & Continue), ಆಧಾರ್ ಓಟಿಪಿ ಮೂಲಕ ದೃಢೀಕರಿಸಿ
ಗಮನಿಸಬೇಕಾದ ಅಂಶಗಳು:
ನಿಮ್ಮ ವೇತನ ಬರುವ ಖಾತೆಯನ್ನೇ ಎನ್‌ಪಿಸಿಐ ಮ್ಯಾಪಿಂಗ್‌ಗೆ ಬಳಸುವುದು ಕಡ್ಡಾಯ.
ಸರಿಯಾಗಿ ಮ್ಯಾಪಿಂಗ್ ಆಗಿದ್ದರೆ ಮಾತ್ರ ಡಿಬಿಟಿ ಮೂಲಕ ವೇತನ ಜಮೆಯಾಗುತ್ತದೆ.
ಪಂಚತಂತ್ರ 2.0 (Panchatantra 2.0) ಪೋರ್ಟಲ್‌ನಲ್ಲಿ ನಿಮ್ಮ ಹಾಜರಾತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಗೈರುಹಾಜರಿಯಿದ್ದಲ್ಲಿ ರಜೆಗಳನ್ನು ನಮೂದಿಸಿ ವೇತನದ ಮೊತ್ತವನ್ನು ಸರಿಪಡಿಸಿಕೊಳ್ಳಿ

No comments:
Post a Comment