ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದ ಅರ್ಹ ಅವಲಂಬಿತರಿಗೆ ನೀಡಲಾಗುವ ಅನುಕಂಪದ ಆಧಾರದ ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ಮತ್ತು ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ
ಪ್ರಮುಖ ಮುಖ್ಯಾಂಶಗಳು:
ಮೂಲ ಇಲಾಖೆಯಲ್ಲೇ ನೇಮಕಾತಿಗೆ ಆದ್ಯತೆ: ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರ ಪ್ರಕಾರ, ಮೃತ ನೌಕರರ ಅವಲಂಬಿತರಿಗೆ ಅವರು ಸೇವೆ ಸಲ್ಲಿಸುತ್ತಿದ್ದ ಮಾತೃ ಇಲಾಖೆಯಲ್ಲೇ ನೇರ ನೇಮಕಾತಿ ರಿಕ್ತಸ್ಥಾನಗಳಿಗೆದುರಾಗಿ ಹುದ್ದೆ ನೀಡಬೇಕಾಗುತ್ತದೆ
. ಹುದ್ದೆಗಳು ಖಾಲಿ ಇಲ್ಲದಿದ್ದರೆ ಬದಲಿ ವ್ಯವಸ್ಥೆ: ಒಂದು ವೇಳೆ ಮಾತೃ ಇಲಾಖೆಯಲ್ಲಿ ಹುದ್ದೆಗಳು ಲಭ್ಯವಿಲ್ಲದಿದ್ದರೆ ಮಾತ್ರ, ಅಭ್ಯರ್ಥಿಯು ವಾಸಿಸುವ ವ್ಯಾಪ್ತಿಯ ಪ್ರಾದೇಶಿಕ ಆಯುಕ್ತರಿಗೆ ಅರ್ಜಿಗಳನ್ನು ಕಳುಹಿಸಿಕೊಡಬೇಕು
. ಇತರೆ ಇಲಾಖೆಗಳಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲು ಪ್ರಾದೇಶಿಕ ಆಯುಕ್ತರನ್ನು ಸಮನ್ವಯಾಧಿಕಾರಿಯನ್ನಾಗಿ ನೇಮಿಸಲಾಗಿದೆ . ಪ್ರಭಾವ ಬೀರುವುದಕ್ಕೆ ಬ್ರೇಕ್ – ಪಾರದರ್ಶಕತೆಗೆ ಆದ್ಯತೆ: ಕೆಲವೊಂದು ನಿರ್ದಿಷ್ಟ ಆಯ್ದ ಇಲಾಖೆಗಳಲ್ಲೇ ನೇಮಕಾತಿ ಪಡೆಯಲು ಅಭ್ಯರ್ಥಿಗಳು ಪ್ರಭಾವ ಬೀರುವುದನ್ನು ತಪ್ಪಿಸಲು ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದೆ
. ಇನ್ನು ಮುಂದೆ ಪ್ರಾದೇಶಿಕ ಆಯುಕ್ತರು ನೇರವಾಗಿ ಇಲಾಖೆಗಳಿಂದ ಖಾಲಿ ಹುದ್ದೆಗಳ ಮಾಹಿತಿಯನ್ನು ಕೋರುವಂತಿಲ್ಲ .
ಹೊಸ ತಾಂತ್ರಿಕ ಪ್ರಕ್ರಿಯೆ ಮತ್ತು ನಿಯಮಗಳು:
HRMS ಮೂಲಕ ಮಾಹಿತಿ ಲಭ್ಯತೆ: ಪ್ರಾದೇಶಿಕ ಆಯುಕ್ತರ ವ್ಯಾಪ್ತಿಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳ ವೃಂದವಾರು ಹಾಗೂ ಜಿಲ್ಲಾವಾರು ವಿವರಗಳನ್ನು ಪ್ರತಿ ತಿಂಗಳು HRMS-1 ಮೂಲಕ ಒದಗಿಸಲಾಗುತ್ತದೆ
. ಹೆಚ್ಚು ಖಾಲಿ ಇರುವ ಇಲಾಖೆಗೆ ಹಂಚಿಕೆ: ಈ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ, ಅಭ್ಯರ್ಥಿಯ ಅರ್ಹತೆಗೆ ತಕ್ಕಂತೆ ಯಾವ ಇಲಾಖೆಯಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಇವೆಯೋ, ಆ ಇಲಾಖೆಗೆ ನ್ಯಾಯಯುತವಾಗಿ ಹುದ್ದೆಯನ್ನು ಹಂಚಿಕೆ ಮಾಡಲಾಗುವುದು
. ಮಾಹಿತಿ ಅಪ್‌ಡೇಟ್ ಮಾಡಲು ಸೂಚನೆ: ನೇರ ನೇಮಕಾತಿ, ಬಡ್ತಿ ವಿವರಗಳು ಹಾಗೂ ಇತ್ತೀಚಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು 'HRMS-2 Organogram' ಮಾಡ್ಯೂಲ್‌ನಲ್ಲಿ ತಕ್ಷಣವೇ ಅಪ್‌ಡೇಟ್ ಮಾಡಿ, ಡೇಟಾವನ್ನು ದೃಢೀಕರಿಸುವಂತೆ ಎಲ್ಲಾ ಇಲಾಖೆಗಳು ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ಸರ್ಕಾರ ಕಡ್ಡಾಯ ಸೂಚನೆ ನೀಡಿದೆ
.
ಮೃತ ನೌಕರರ ಕುಟುಂಬದ ತಕ್ಷಣದ ಆರ್ಥಿಕ ಸಂಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಜಾರಿಗೆ ತರಲಾದ ಈ ವ್ಯವಸ್ಥೆಯಲ್ಲಿ ವಿಳಂಬ ಧೋರಣೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ

No comments:
Post a Comment