![]() |
ಏನಿದು ಈ ಮೆಗಾ ಆಪರೇಷನ್?
ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಅರ್ಹ ಮತದಾರರ ಹೆಸರನ್ನು ಸೇರಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ. ಈ ಹಿಂದೆ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೋಟ್ಯಾಂತರ ನಕಲಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದೀಗ ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ 3ನೇ ಹಂತದ ಈ ಪ್ರಕ್ರಿಯೆ ಚಾಲನೆ ಪಡೆದಿದೆ.
ಪ್ರಮುಖ ದಿನಾಂಕಗಳು:
ಆಗಸ್ಟ್ 5, 2026: ಕರಡು ಮತದಾರರ ಪಟ್ಟಿ ಪ್ರಕಟ.
ಸೆಪ್ಟೆಂಬರ್ 4, 2026: ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ.
ಅಕ್ಟೋಬರ್ 7, 2026: ಅಂತಿಮ ಮತದಾರರ ಪಟ್ಟಿಯ ಬಿಡುಗಡೆ.
ನಿಮ್ಮ ಹೆಸರು ಡಿಲೀಟ್ ಆಗಬಾರದೆಂದರೆ ಏನು ಮಾಡಬೇಕು?
ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸುವುದು ಕಡ್ಡಾಯ.
ದಾಖಲೆಗಳು ಬೇಕಿಲ್ಲದವರು: 2002ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಅಂದಿನಿಂದ ಸಕ್ರಿಯ ಮತದಾರರಾಗಿರುವವರು ಹೊಸದಾಗಿ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ.
ದಾಖಲೆ ಬೇಕಿರುವವರು: ಹೊಸದಾಗಿ ಹೆಸರು ಸೇರ್ಪಡೆ ಮಾಡುವವರು ಅಥವಾ 2002ರ ನಂತರ ಸೇರ್ಪಡೆಯಾದವರು ಪೌರತ್ವ ದೃಢೀಕರಿಸಲು ಸೂಕ್ತ ದಾಖಲೆ ನೀಡಬೇಕು.
ಅಗತ್ಯವಿರುವ ದಾಖಲೆಗಳ ಪಟ್ಟಿ:
ಜನನ ಪ್ರಮಾಣಪತ್ರ ಅಥವಾ ಪಾಸ್‌ಪೋರ್ಟ್.
ಸರ್ಕಾರಿ ಉದ್ಯೋಗಿ ಅಥವಾ ಪಿಂಚಣಿದಾರರ ಗುರುತಿನ ಚೀಟಿ.
ಮೆಟ್ರಿಕ್ಯುಲೇಷನ್ (SSLC) ಅಥವಾ ಶೈಕ್ಷಣಿಕ ಪ್ರಮಾಣಪತ್ರ.
ಜಾತಿ ಪ್ರಮಾಣಪತ್ರ ಅಥವಾ ಕಾಯಂ ನಿವಾಸ ಪ್ರಮಾಣಪತ್ರ.
ಗಮನಿಸಿ: ಆಧಾರ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಮಾತ್ರ ಪರಿಗಣಿಸಲಾಗುತ್ತದೆ, ಆದರೆ ಇದು ಪೌರತ್ವ ದೃಢೀಕರಣದ ಏಕೈಕ ದಾಖಲೆಯಲ್ಲ. ಹಾಗೆಯೇ ಡ್ರೈವಿಂಗ್ ಲೈಸೆನ್ಸ್ ಅನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ತಂತ್ರಜ್ಞಾನದ ಬಳಕೆ:
ನಕಲಿ ಮತದಾರರನ್ನು ಪತ್ತೆಹಚ್ಚಲು ಈ ಬಾರಿ ಆಧುನಿಕ ಸಾಫ್ಟ್‌ವೇರ್ ಬಳಸಲಾಗುತ್ತಿದೆ. ಫೋಟೋ ಮತ್ತು ಮಾಹಿತಿ 65% ಕ್ಕಿಂತ ಹೆಚ್ಚು ಮ್ಯಾಚ್ ಆದರೆ ಅಂತಹ ಹೆಸರುಗಳನ್ನು ಆಯೋಗವು ತೀವ್ರ ಪರಿಶೀಲನೆಗೆ ಒಳಪಡಿಸುತ್ತದೆ. ಮತದಾರರು ಮನೆಯಲ್ಲಿ ಇಲ್ಲದಿದ್ದರೆ, ಕ್ಯೂಆರ್ ಕೋಡ್ (QR Code) ಮೂಲಕ ತಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿದೆ.
ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಈ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ನಿಮ್ಮ ವೋಟರ್ ಐಡಿ ಅಸಿಂಧು ಆಗದಂತೆ ಎಚ್ಚರ ವಹಿಸಿ.

No comments:
Post a Comment