ಬೆಂಗಳೂರು: ರಸ್ತೆ ಅಪಘಾತಕ್ಕೀಡಾದ ಸಂತ್ರಸ್ತರಿಗೆ ತ್ವರಿತ ಮತ್ತು ನಗದು ರಹಿತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ನಿಯಮಗಳು, 2026 ಅನ್ನು ಅಧಿಕೃತವಾಗಿ ಹೊರಡಿಸಲಾಗಿದ್ದು, ಇವು ತಕ್ಷಣದಿಂದಲೇ ಜಾರಿಗೆ ಬರಲಿವೆ
ಮುಖ್ಯಾಂಶಗಳು:
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ, 2017ರ ಅಡಿಯಲ್ಲಿ ಈ ಹೊಸ ತಿದ್ದುಪಡಿಗಳನ್ನು ತರಲಾಗಿದೆ
ನಗದು ರಹಿತ ಚಿಕಿತ್ಸೆ ಉಸ್ತುವಾರಿ: ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮತ್ತು ಸಮನ್ವಯತೆಯನ್ನು ಮಾಡುವುದು
. ಆಸ್ಪತ್ರೆಗಳ ಜಾಗೃತಿ: ಯೋಜನೆಯ ವ್ಯಾಪ್ತಿಗೆ ಒಳಪಡದ ಆಸ್ಪತ್ರೆಗಳನ್ನು ಯೋಜನೆಯ ಅನುಷ್ಠಾನದ ಕುರಿತು ಸಂವೇದನಾಶೀಲಗೊಳಿಸುವುದು ಮತ್ತು ಜಿಲ್ಲಾಡಳಿತದ ಮೂಲಕ ಬೆಂಬಲ ನೀಡುವುದು
. ಕುಂದುಕೊರತೆ ನಿವಾರಣೆ: ಯೋಜನೆಯ ಅನುಷ್ಠಾನದಲ್ಲಿ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಿಂದ ಒಬ್ಬ ಪ್ರತ್ಯೇಕ 'ಕುಂದುಕೊರತೆ ನಿವಾರಣಾ ಅಧಿಕಾರಿ'ಯನ್ನು (Grievance Redressal Officer) ನೇಮಿಸುವುದು
.
ಈ ನಿಯಮಗಳ ಕರಡನ್ನು ಫೆಬ್ರವರಿ 2026ರಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು
No comments:
Post a Comment