📢
PDO ಅವರ ಹಿತರಕ್ಷಣೆಗೆ ಸರ್ಕಾರದ ಮಹತ್ವದ ಆದೇಶ!
ಅನಗತ್ಯ ಕಿರುಕುಳಕ್ಕೆ ಬ್ರೇಕ್ - ಸಂಘದ ಹೋರಾಟಕ್ಕೆ ಮತ್ತೊಂದು ಜಯ
🛑
ಆಧಾರರಹಿತ ದೂರುಗಳಿಗೆ ಬ್ರೇಕ್
ಸೂಕ್ತ ದಾಖಲೆಗಳಿಲ್ಲದೆ ಪಿಡಿಒಗಳ ವಿರುದ್ಧ ಸಲ್ಲಿಸುವ ದೂರುಗಳನ್ನು ನಿಯಂತ್ರಿಸಲು ರಾಜ್ಯದ ಎಲ್ಲಾ ಓಂಬುಡ್ಸ್ ಪರ್ಸನ್‌ಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
🤝
ಸಂಘದ ಸತತ ಪ್ರಯತ್ನಕ್ಕೆ ಸಂದ ಫಲ
ಸುಳ್ಳು ಮಾಹಿತಿ ಹಕ್ಕು ಕಾರ್ಯಕರ್ತರ ಹೆಸರಲ್ಲಿ ನೀಡುತ್ತಿದ್ದ ಮಾನಸಿಕ ಕಿರುಕುಳದ ವಿರುದ್ಧ ಸಂಘವು 09.05.2025 ರಂದು ಸಲ್ಲಿಸಿದ್ದ ಮನವಿಗೆ ಅಧಿಕೃತ ಜಯ ಸಿಕ್ಕಿದೆ.
📄
ಪೂರಕ ದಾಖಲೆ ಸಲ್ಲಿಕೆ ಕಡ್ಡಾಯ
ಇನ್ಮುಂದೆ ನರೇಗಾ ಯೋಜನೆಯಡಿ ದೂರು ದಾಖಲಿಸುವ ಮೊದಲು ದೂರುದಾರರು ಕಡ್ಡಾಯವಾಗಿ ಪೂರಕ ದಾಖಲೆಗಳನ್ನು ಸಲ್ಲಿಸಿರುವುದನ್ನು ಖಚಿತಪಡಿಸಿಕೊಳ್ಳಲು ಆದೇಶಿಸಲಾಗಿದೆ.
ಸಂಘಟನೆಯೇ ಶಕ್ತಿ - ನಮ್ಮ ಒಗ್ಗಟ್ಟು ನಮ್ಮ ರಕ್ಷಣೆ

No comments:
Post a Comment