ಬೆಂಗಳೂರು: ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95 ಮತ್ತು ನಿಯಮ 106ಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರವು ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸುವ ಭೂ ಪರಿವರ್ತನಾ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಿದೆ
ಸುದ್ದಿಯ ಮುಖ್ಯಾಂಶಗಳು:
ಮಾಸ್ಟರ್ ಪ್ಲಾನ್ ಪ್ರದೇಶ (Master Plan Area): ಮಾಸ್ಟರ್ ಪ್ಲಾನ್ ವ್ಯಾಪ್ತಿಯೊಳಗೆ ಬರುವ ಜಮೀನುಗಳಿಗೆ ಅಫಿಡೆವಿಟ್ ಆಧಾರಿತ ಭೂಪರಿವರ್ತನೆ ಅರ್ಜಿ ಸಲ್ಲಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ
. ಇಂತಹ ಜಮೀನುಗಳ ಮಾಲೀಕರು ಇನ್ನು ಮುಂದೆ ನೇರವಾಗಿ ಸಂಬಂಧಪಟ್ಟ ಸ್ಥಳೀಯ ಯೋಜನಾ ಪ್ರಾಧಿಕಾರವನ್ನು (Planning Authority) ಸಂಪರ್ಕಿಸಬೇಕಾಗುತ್ತದೆ . ಹಳೆಯ ಅರ್ಜಿಗಳ ವಿಲೇವಾರಿ: 23.12.2025ಕ್ಕಿಂತ ಮೊದಲು ಸಲ್ಲಿಕೆಯಾಗಿ ಬಾಕಿ ಇರುವ ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಅರ್ಜಿಗಳನ್ನು ತಂತ್ರಾಂಶದಲ್ಲಿ ಸ್ಥಗಿತಗೊಳಿಸಿ (Freeze), ಪಾವತಿಸಲಾದ ಶುಲ್ಕವನ್ನು ಅರ್ಜಿದಾರರಿಗೆ ಹಿಂದಿರುಗಿಸಲು ಸೂಚಿಸಲಾಗಿದೆ
. ಪರಿಭಾವಿತ ಭೂಪರಿವರ್ತನೆ (Deemed Conversion):
ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಡೆ ಇರುವ ಜಮೀನುಗಳಿಗೆ ಅಫಿಡೆವಿಟ್ ಮೂಲಕ ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಅದನ್ನು 'ಪರಿಭಾವಿತ ಭೂಪರಿವರ್ತನೆ' ಎಂದು ಪರಿಗಣಿಸಿ ತಂತ್ರಾಂಶದ ಮೂಲಕವೇ ಸ್ವಯಂಚಾಲಿತವಾಗಿ ಅನುಮೋದನೆ ನೀಡಲಾಗುವುದು. ಕೈಗಾರಿಕೆ ಮತ್ತು ಇಂಧನ ಯೋಜನೆಗಳಿಗೆ ಆದ್ಯತೆ: ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿನ 2 ಎಕರೆಗಿಂತ ಕಡಿಮೆ ವಿಸ್ತೀರ್ಣದ ಕೈಗಾರಿಕಾ ಉದ್ದೇಶದ ಜಮೀನು ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳ (Renewable Energy Projects) ಅರ್ಜಿಗಳಿಗೆ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆ ದೊರೆಯಲಿದೆ
.
ಅರ್ಜಿದಾರರ ಗಮನಕ್ಕೆ:
ಭೂ ಪರಿವರ್ತನಾ ತಂತ್ರಾಂಶದಲ್ಲಿ ಇನ್ನು ಮುಂದೆ ನಗರಾಭಿವೃದ್ಧಿ ಇಲಾಖೆ ಅಥವಾ ಯೋಜನಾ ಪ್ರಾಧಿಕಾರದ URL ಮಾಹಿತಿ ಲಭ್ಯವಿರಲಿದ್ದು, ಅರ್ಜಿದಾರರಿಗೆ Pop-up ಸಂದೇಶದ ಮೂಲಕ ಮಾರ್ಗದರ್ಶನ ನೀಡಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ
ಈ ಹೊಸ ನಿಯಮಗಳು ದಿನಾಂಕ 23.12.2025 ರಿಂದಲೇ ಜಾರಿಗೆ ಬಂದಿದ್ದು, ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ

No comments:
Post a Comment