LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

15 March 2026

NOC ನೀಡುವ ಮುನ್ನ ಯೋಚಿಸಿ?

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಗಮನಕ್ಕೆ

NOC ನೀಡುತ್ತಿದ್ದಿರಾ? ಹಾಗದ್ರೆ ಇದನ್ನು ಗಮನಿಸಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ದಿಮೆ ಅಥವಾ ಇತರ ಚಟುವಟಿಕೆಗಳಿಗೆ NOC ನೀಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಒಮ್ಮೆ ನೀಡಿದ NOC ಭವಿಷ್ಯದಲ್ಲಿ ಕಾನೂನು ಸಂಘರ್ಷಕ್ಕೆ ಕಾರಣವಾಗಬಹುದು.

PDO ವಹಿಸಬೇಕಾದ ಪ್ರಮುಖ ಕ್ರಮಗಳು:

೧. ದಾಖಲೆಗಳ ಸಮಗ್ರ ಪರಿಶೀಲನೆ
  • ಜಾಗದ ಮಾಲೀಕತ್ವ: ಪಹಣಿ (RTC), ಕ್ರಯ ಪತ್ರ ಅಥವಾ ಬಾಡಿಗೆ ಕರಾರು ಪತ್ರ.
  • ಭೂ ಪರಿವರ್ತನೆ: ಜಿಲ್ಲಾಧಿಕಾರಿಗಳಿಂದ ಕೃಷಿಯೇತರ ಉದ್ದೇಶಕ್ಕೆ (NA) ಪರವಾನಗಿ ಪಡೆದಿದ್ದಾರೆಯೇ?
  • ನಕ್ಷೆ ಅನುಮೋದನೆ: ಉದ್ದಿಮೆ ಸ್ಥಾಪಿಸುವ ಕಟ್ಟಡದ ನೀಲಿನಕ್ಷೆ (Blue Print).
೨. ಸ್ಥಳ ಪರಿಶೀಲನೆ (Spot Inspection)
  • ಜನವಸತಿ ಪ್ರದೇಶ: ಮನೆಗಳು, ಶಾಲೆಗಳು ಅಥವಾ ಆಸ್ಪತ್ರೆಗಳಿಗೆ ಇರುವ ಅಂತರ ಗಮನಿಸಿ.
  • ಪರಿಸರ ಕಾಳಜಿ: ತ್ಯಾಜ್ಯ ನೀರು ನೀರಿನ ಮೂಲಗಳಿಗೆ ಸೇರುತ್ತದೆಯೇ ಎಂದು ಪರೀಕ್ಷಿಸಿ.
  • ರಸ್ತೆ ಸಂಪರ್ಕ: ಭಾರೀ ವಾಹನಗಳ ಸಂಚಾರಕ್ಕೆ ರಸ್ತೆ ಸೌಕರ್ಯವಿದೆಯೇ?
೩. ಅಂತರ-ಇಲಾಖಾ ಸಮನ್ವಯ

ಅಪಾಯಕಾರಿ (D&O) ಉದ್ದಿಮೆಗಳಾಗಿದ್ದರೆ ಈ ವರದಿಗಳು ಕಡ್ಡಾಯ:

  • KSPCB: ಮಾಲಿನ್ಯ ನಿಯಂತ್ರಣ ಮಂಡಳಿಯ ಸಮ್ಮತಿ ಪತ್ರ.
  • ಆರೋಗ್ಯ ಇಲಾಖೆ: ತಾಲ್ಲೂಕು ಆರೋಗ್ಯ ಅಧಿಕಾರಿಯವರ (THO) ವರದಿ.
  • ಅಗ್ನಿಶಾಮಕ ದಳ: ಅಗ್ನಿ ಸುರಕ್ಷತೆಯ ಪ್ರಮಾಣಪತ್ರ.
೪. ಸಾರ್ವಜನಿಕ ಆಕ್ಷೇಪಣೆ & ೫. ಸಭೆಯ ನಿರ್ಣಯ
  • ಪಂಚಾಯಿತಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಣೆ ಹಾಕಿ 7-15 ದಿನಗಳ ಕಾಲಾವಕಾಶ ನೀಡಿ ಆಕ್ಷೇಪಣೆ ಆಹ್ವಾನಿಸಿ.
  • ವಿಷಯವನ್ನು ಸಾಮಾನ್ಯ ಸಭೆಯ (General Body Meeting) ಮುಂದೆ ಇಟ್ಟು ನಿರ್ಣಯ ಕೈಗೊಳ್ಳಿ.
೬. ಷರತ್ತುಬದ್ಧ ಅನುಮತಿ (Conditional NOC)
"ಸಾರ್ವಜನಿಕ ದೂರು ಅಥವಾ ನಿಯಮ ಉಲ್ಲಂಘನೆಯಾದಲ್ಲಿ ಮುನ್ಸೂಚನೆ ಇಲ್ಲದೆ NOC ರದ್ದುಪಡಿಸಲಾಗುವುದು." "ಕೇವಲ ಅರ್ಜಿ ಸಲ್ಲಿಸಿದ ಉದ್ದೇಶಕ್ಕೆ ಮಾತ್ರ ಜಾಗ ಬಳಸಬೇಕು." "ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು."

No comments:

Post a Comment