LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

11 February 2026

ಸರ್ಕಾರಿ ಆದೇಶಗಳಲ್ಲಿ ಇನ್ನು ಮುಂದೆ 'ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ' ಎಂಬ ಉಲ್ಲೇಖ ಕಡ್ಡಾಯ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹೊರಡಿಸುವ ಅಧಿಕೃತ ಆದೇಶ ಹಾಗೂ ಪತ್ರವ್ಯವಹಾರಗಳಲ್ಲಿ ಇನ್ನು ಮುಂದೆ ಒಂದು ಮಹತ್ವದ ಬದಲಾವಣೆ ತರಲಾಗಿದೆ. ಯಾವುದೇ ಆದೇಶದ ಕೊನೆಯಲ್ಲಿ ನಿರ್ದಿಷ್ಟ ಹುದ್ದೆಗಳ ಹೆಸರನ್ನು ಬಳಸುವ ಬದಲಿಗೆ, ಕಡ್ಡಾಯವಾಗಿ "ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ" ಎಂದು ನಮೂದಿಸುವಂತೆ ಸರ್ಕಾರ ಆದೇಶಿಸಿದೆ.

ಏನಿದು ಹೊಸ ಬದಲಾವಣೆ?

ಈ ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಹೊರಡಿಸಲಾಗುತ್ತಿದ್ದ ಆದೇಶ ಅಥವಾ ಸುತ್ತೋಲೆಗಳಲ್ಲಿ ಅನುಮೋದನೆಯನ್ನು ಸೂಚಿಸಲು ಈ ಕೆಳಗಿನ ಸಾಲುಗಳನ್ನು ಬಳಸಲಾಗುತ್ತಿತ್ತು:

  • ​ಮಾನ್ಯ ಮುಖ್ಯಮಂತ್ರಿಯವರಿಂದ ಅನುಮೋದಿತ
  • ​ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಂದ ಅನುಮೋದಿತ
  • ​ಸರ್ಕಾರದ ಕಾರ್ಯದರ್ಶಿಯವರಿಂದ ಅನುಮೋದಿತ

​ಆದರೆ, ದಿನಾಂಕ 17/11/2025 ರಂದು ಹೊರಡಿಸಲಾದ ಹೊಸ ಸುತ್ತೋಲೆಯ ಪ್ರಕಾರ (ಸಂಖ್ಯೆ: ಸಿಆಸುಇ 267 ರಾಸ 2025), ಇನ್ನು ಮುಂದೆ ಈ ಮೇಲಿನ ಎಲ್ಲಾ ಉಲ್ಲೇಖಗಳ ಬದಲಾಗಿ ಕೇವಲ "ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ" (Approved by Competent Authority) ಎಂದು ಮಾತ್ರ ಬಳಸಲು ಸೂಚಿಸಲಾಗಿದೆ.

ಯಾರಿಗೆ ಅನ್ವಯ?

ಸರ್ಕಾರದ ಎಲ್ಲಾ ಅಪರ, ಉಪ ಮತ್ತು ಅಧೀನ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಎಲ್ಲಾ ವಿಭಾಗಗಳಿಗೆ ಈ ಸೂಚನೆಯನ್ನು ಪಾಲಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಸಂದೀಪ್ ಬಿ.ಕೆ. ಅವರು ತಿಳಿಸಿದ್ದಾರೆ.

​ಆಡಳಿತಾತ್ಮಕ ಪತ್ರವ್ಯವಹಾರಗಳಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

No comments:

Post a Comment