LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

27 January 2026

ಗ್ರಾಮದ ನೀರಿನ ವ್ಯವಸ್ಥೆ ಇನ್ನು ಜನರ ಕೈಯಲ್ಲಿ: 'ಜಲ ಅರ್ಪಣಾ ದಿವಸ'ಕ್ಕೆ ಗ್ರಾಮ ಪಂಚಾಯಿತಗಳ ಸಿದ್ಧತೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಗ್ರಾಮಗಳಲ್ಲಿ ಮಹತ್ವದ **'ಜಲ ಅರ್ಪಣಾ ದಿವಸ'**ವನ್ನು ಆಚರಿಸಲಾಗುತ್ತಿದೆ. ಜಲ ಜೀವನ ಮಿಷನ್ (JJM) ಯೋಜನೆಯಡಿ ಪೂರ್ಣಗೊಂಡಿರುವ ನಳ ಸಂಪರ್ಕ ವ್ಯವಸ್ಥೆಯನ್ನು ಅಧಿಕೃತವಾಗಿ ಗ್ರಾಮ ಪಂಚಾಯತಿ ಮತ್ತು ಸಮುದಾಯಕ್ಕೆ ಹಸ್ತಾಂತರಿಸುವುದು ಈ ದಿನದ ವಿಶೇಷವಾಗಿದೆ.

ಏನಿದು ಜಲ ಅರ್ಪಣಾ ದಿವಸ?

ಇದು ಕೇವಲ ಒಂದು ಔಪಚಾರಿಕ ಕಾರ್ಯಕ್ರಮವಲ್ಲ, ಬದಲಾಗಿ ಗ್ರಾಮದ ಜನರು ತಮ್ಮ ಕುಡಿಯುವ ನೀರಿನ ವ್ಯವಸ್ಥೆಯ ಮೇಲೆ ಮಾಲೀಕತ್ವವನ್ನು ಪಡೆಯುವ ಹಬ್ಬವಾಗಿದೆ. ಗ್ರಾಮೀಣ ಸಮುದಾಯಕ್ಕೆ 24x7 ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಜವಾಬ್ದಾರಿಯ ಅರಿವು ಮೂಡಿಸುವ ಸಲುವಾಗಿ ಇಲಾಖೆಯು ಈ ಕಾರ್ಯಕ್ರಮವನ್ನು ಲೋಕಾರ್ಪಣೆಗೊಳಿಸುತ್ತಿದೆ.

ಮುಖ್ಯ ಅಂಶಗಳು:

  • ಮಾಲೀಕತ್ವ ಮತ್ತು ಜವಾಬ್ದಾರಿ: ಜಲ ಅರ್ಪಣಾ ದಿವಸದ ಮೂಲಕ ಹಸ್ತಾಂತರಗೊಂಡ ನಂತರ, ಆ ನೀರಿನ ವ್ಯವಸ್ಥೆಗೆ ಗ್ರಾಮಸ್ಥರೇ ಮಾಲೀಕರಾಗಿರುತ್ತಾರೆ.

  • ಸುಸ್ಥಿರ ನಿರ್ವಹಣೆ: ನೀರಿನ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುವ, ರಕ್ಷಿಸುವ ಮತ್ತು ಸುಸ್ಥಿತಿಯಲ್ಲಿ ನಿರ್ವಹಿಸುವ ಸಂಪೂರ್ಣ ಜವಾಬ್ದಾರಿ ಇನ್ನು ಮುಂದೆ ಗ್ರಾಮದ ಜನರದ್ದಾಗಿರುತ್ತದೆ.

  • ಬಲವರ್ಧನೆ: ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ನೀತಿಯೊಂದಿಗೆ ನೀರಿನ ಪೂರೈಕೆಯನ್ನು ಇನ್ನುಷ್ಟು ಸಧೃಡಗೊಳಿಸಲಾಗುವುದು.

ಈ ಯೋಜನೆಯ ಯಶಸ್ವಿ ಅನುಷ್ಠಾನದಿಂದಾಗಿ ಗ್ರಾಮದ ಪ್ರತಿ ಮನೆಗೂ ನಲ್ಲಿಯ ಮೂಲಕ ಶುದ್ಧ ನೀರು ತಲುಪುತ್ತಿದ್ದು, ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ.

No comments:

Post a Comment