LIVE

ಸುದ್ದಿ
ಮಾಹಿತಿ ಸಿದ್ಧವಾಗುತ್ತಿದೆ...

MENU BAR

ಸಂಘ
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು Reg No: DRB4/SOR/420/2023-24 ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ. Registered under Karnataka Co-operative Societies Act, 1960. ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್ ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ

12 January 2026

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: 2026ನೇ ಸಾಲಿನ ಗಳಿಕೆ ರಜೆ ನಗದೀಕರಣಕ್ಕೆ ಚಾಲನೆ

 ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರವು ಹೊಸ ವರ್ಷದ ಕೊಡುಗೆಯನ್ನು ನೀಡಿದ್ದು, 2026ನೇ ಸಾಲಿನ ಬ್ಲಾಕ್ ಅವಧಿಯಲ್ಲಿ 15 ದಿನಗಳ ಗಳಿಕೆ ರಜೆಯನ್ನು (Earned Leave) ನಗದೀಕರಿಸಿಕೊಳ್ಳಲು ಅಧಿಕೃತ ಆದೇಶ ಹೊರಡಿಸಿದೆ.

ಯಾರಿಗೆಲ್ಲಾ ಈ ಸೌಲಭ್ಯ ಅನ್ವಯ?

  • ರಾಜ್ಯ ಸರ್ಕಾರದ ಎಲ್ಲಾ ವೃಂದದ ಅಧಿಕಾರಿಗಳು ಮತ್ತು ನೌಕರರು ಈ ಸೌಲಭ್ಯ ಪಡೆಯಬಹುದು.

  • ಸರ್ಕಾರದಿಂದ ಸಹಾಯಾನುದಾನ ಪಡೆಯುವ ಹಾಗೂ ಪಡೆಯದ ಎಲ್ಲಾ ಸಂಸ್ಥೆಗಳು ಮತ್ತು ಉದ್ಯಮಗಳ ನೌಕರರಿಗೂ ಇದು ಅನ್ವಯಿಸುತ್ತದೆ.

  • ಆದರೆ, ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಆಯಾ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಈ ಸೌಲಭ್ಯ ದೊರೆಯಲಿದೆ.

ಪ್ರಮುಖ ಅಂಶಗಳು ಮತ್ತು ಷರತ್ತುಗಳು:

  • ರಜೆ ಮಿತಿ: ನೌಕರರು ಗರಿಷ್ಠ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ, ಅದಕ್ಕೆ ಸಮನಾದ ವೇತನವನ್ನು ಪಡೆಯಬಹುದು.

  • ಅವಧಿ: ಈ ಸೌಲಭ್ಯವು ಜನವರಿ 1, 2026 ರಿಂದ ಡಿಸೆಂಬರ್ 31, 2026 ರವರೆಗೆ ಜಾರಿಯಲ್ಲಿರುತ್ತದೆ.

  • ಅರ್ಜಿ ಪ್ರಕ್ರಿಯೆ: ನೌಕರರು ತಾವು ಇಚ್ಛಿಸುವ ಯಾವುದೇ ತಿಂಗಳಿನಲ್ಲಿ ರಜೆ ನಗದೀಕರಿಸಿಕೊಳ್ಳಲು ಒಂದು ತಿಂಗಳು ಮುಂಚಿತವಾಗಿ ಮನವಿ ಸಲ್ಲಿಸಬೇಕು.

  • ಹಣಕಾಸು ನಿಯಮ: ರಜೆ ನಗದೀಕರಣದ ಆರ್ಥಿಕ ಪ್ರಯೋಜನವನ್ನು ಸಂಬಂಧಿಸಿದ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಮೊದಲೆ ಪಡೆದುಕೊಳ್ಳಬೇಕು.

  • ಗೆಜೆಟೆಡ್ ಅಧಿಕಾರಿಗಳು: ಇವರ ರಜೆ ಲೆಕ್ಕಾಚಾರವು ಹೆಚ್‌ಆರ್‌ಎಂಎಸ್ (HRMS) ನಲ್ಲಿ ಲಭ್ಯವಿರುವ ಅಂಕಿಅಂಶಗಳ ಆಧಾರದ ಮೇಲೆ ನಡೆಯಲಿದೆ.

ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ನೌಕರರಿಗೆ ಆರ್ಥಿಕ ಅನುಕೂಲವಾಗಲಿದ್ದು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ (KCSR) ನಿಯಮ 118(2)(i) ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ

No comments:

Post a Comment