ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲದ ಅತಿಯಾದ ಬಳಕೆ ತಡೆಯಲು ಮತ್ತು ಜಲಮೂಲಗಳ ಸಂರಕ್ಷಣೆಗಾಗಿ ಕರ್ನಾಟಕ ಸರ್ಕಾರವು 'ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ, 2011'ಕ್ಕೆ ಮಹತ್ವದ ತಿದ್ದುಪಡಿ ತಂದಿದೆ
ಕರ್ನಾಟಕ ಅಂತರ್ಜಲ (ತಿದ್ದುಪಡಿ) ಅಧಿನಿಯಮ, 2025' ಕ್ಕೆ ರಾಜ್ಯಪಾಲರು ದಿನಾಂಕ 11.09.2025 ರಂದು ಒಪ್ಪಿಗೆ ನೀಡಿದ್ದು, ಸೆಪ್ಟೆಂಬರ್ 12 ರಂದು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾಗುವುದರೊಂದಿಗೆ ಇದು ಜಾರಿಗೆ ಬಂದಿದೆ
ಅಂತರ್ಜಲ ಪ್ರಾಧಿಕಾರದ ಪುನರ್ರಚನೆ
ಕಾಯ್ದೆಯ 3ನೇ ಪ್ರಕರಣಕ್ಕೆ ತಿದ್ದುಪಡಿ ತರುವ ಮೂಲಕ ಪ್ರಾಧಿಕಾರದ ಆಡಳಿತ ಮಂಡಳಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ:
ಅಧ್ಯಕ್ಷರು: ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಇನ್ನುಮುಂದೆ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ
. ಸದಸ್ಯ ಕಾರ್ಯದರ್ಶಿ: ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ
.
ಹೊಸ ನಿಯಮದ ಪ್ರಕಾರ, ಅಧಿಸೂಚಿತ ಅಥವಾ ಅಧಿಸೂಚಿತವಲ್ಲದ ಯಾವುದೇ ಪ್ರದೇಶದಲ್ಲಿ ಬಾವಿ ಅಥವಾ ಕೊಳವೆಬಾವಿ ತೋಡಲು ಪ್ರಾಧಿಕಾರದಿಂದ ಅನುಮತಿ ಅಥವಾ ನಿರಾಕ್ಷೇಪಣಾ ಪತ್ರ (NOC) ಪಡೆಯುವುದು ಕಡ್ಡಾಯವಾಗಿದೆ
ವೈಯಕ್ತಿಕ ಗೃಹಬಳಕೆ: ಗ್ರಾಮೀಣ ಮತ್ತು ನಗರ ಪ್ರದೇಶಗಳ ವೈಯಕ್ತಿಕ ಮನೆಗಳಿಗೆ ಕುಡಿಯುವ ನೀರು ಮತ್ತು ಗೃಹ ಬಳಕೆಗಾಗಿ
. ಕೃಷಿ ಚಟುವಟಿಕೆಗಳು: ರೈತರ ಕೃಷಿ ಉದ್ದೇಶಗಳಿಗಾಗಿ ಬಾವಿ ತೋಡಲು ಸಂಪೂರ್ಣ ವಿನಾಯಿತಿ ಇದೆ
. ವಸತಿ ಸಮುಚ್ಚಯಗಳು: ಅಪಾರ್ಟ್ಮೆಂಟ್ಗಳಲ್ಲಿ ಕುಡಿಯುವ ನೀರಿಗಾಗಿ ದಿನಕ್ಕೆ 20 ಘನ ಮೀಟರ್ವರೆಗೆ ಅಂತರ್ಜಲ ಹೊರತೆಗೆಯಲು ಅವಕಾಶವಿದೆ
. ಸಾರ್ವಜನಿಕ ಯೋಜನೆ: ಗ್ರಾಮೀಣ ನೀರು ಸರಬರಾಜು ಯೋಜನೆಗಳು ಮತ್ತು ಸಶಸ್ತ್ರ ಪಡೆಗಳ ಸಂಸ್ಥೆಗಳು
. ಖಾಸಗಿ ಟ್ಯಾಂಕರ್ಗಳು ಮತ್ತು ಕೈಗಾರಿಕೆಗಳ ಮೇಲೆ ನಿಗಾ
ಖಾಸಗಿ ಟ್ಯಾಂಕರ್ಗಳು: ಅಂತರ್ಜಲವನ್ನು ಹೊರತೆಗೆದು ಮಾರಾಟ ಮಾಡುವ ಎಲ್ಲಾ ಖಾಸಗಿ ಟ್ಯಾಂಕರ್ಗಳು ಇನ್ನುಮುಂದೆ ಕಡ್ಡಾಯವಾಗಿ ಪ್ರಾಧಿಕಾರದಿಂದ NOC ಹೊಂದಿರಬೇಕು. ಕೈಗಾರಿಕಾ ಬಳಕೆ: ವಾಣಿಜ್ಯ, ಕೈಗಾರಿಕೆ, ಗಣಿಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳು ಬಳಸುವ ನೀರಿನ ಪ್ರಮಾಣದ ಮೇಲೆ ಸರ್ಕಾರವು ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಗಳಂತೆ ಸೂಕ್ತ ದರಗಳನ್ನು ವಿಧಿಸಲಿದೆ
.
ಕಾಯ್ದೆಯ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದಂಡದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ:
ಮಾಹಿತಿ ನಿರಾಕರಣೆ: ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ತಪ್ಪು ಮಾಹಿತಿ ನೀಡಿದರೆ 50,000 ರೂ. ವರೆಗೆ ದಂಡ ವಿಧಿಸಬಹುದು
. ನಿರಂತರ ಉಲ್ಲಂಘನೆ: ಉಲ್ಲಂಘನೆ ಮುಂದುವರಿದರೆ ಪ್ರತಿ ದಿನಕ್ಕೆ 1,000 ರೂ. ಹೆಚ್ಚುವರಿ ದಂಡ ವಿಧಿಸಲಾಗುತ್ತದೆ
