28 November 2025

ಗ್ರಾಮ ಪಂಚಾಯಿತಿ ಟೆಂಡರ್‌ ಪ್ರಕ್ರಿಯೆಯಲ್ಲಿ ಅಧಿಕಾರ ಪ್ರತ್ಯಾಯೋಜನೆ: ಪಿಡಿಓಅವರಿಗೆ ಡಿಜಿಟಲ್ ಕೀ

 ಬೆಂಗಳೂರು, ಮಾರ್ಚ್ 29, 2023:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯಿತಿ ಮಟ್ಟದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಅಧಿಕಾರಗಳನ್ನು ಪ್ರತ್ಯಾಯೋಜಿಸಲು ಆದೇಶ ಹೊರಡಿಸಿದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಇ-ಸಂಗ್ರಹಣಾ (e-Procurement) ತಂತ್ರಾಂಶದಲ್ಲಿ ಟೆಂಡರ್ ಆಹ್ವಾನಿಸಲು ಡಿಜಿಟಲ್ ಕೀ ನೀಡುವ ಬಗ್ಗೆ ಈ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

ಟೆಂಡರ್ ಅಧಿಕಾರಗಳ ಪ್ರಮುಖ ವಿವರಗಳು:

ಕಾರ್ಯಪ್ರಾಧಿಕಾರಆರ್ಥಿಕ ಮಿತಿ
ಟೆಂಡರ್ ಆಹ್ವಾನಿಸುವ ಮತ್ತು ತೆರೆಯುವ ಪ್ರಾಧಿಕಾರ

ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO)

ಟೆಂಡರ್ ಅನುಮೋದಿಸುವ ಪ್ರಾಧಿಕಾರ

ಗ್ರಾಮ ಪಂಚಾಯತಿ (PDO ಡಿಜಿಟಲ್ ಕೀ ಬಳಸಿ)

₹25 ಲಕ್ಷಗಳವರೆಗೆ 

ಟೆಂಡರ್ ಅನುಮೋದಿಸುವ ಪ್ರಾಧಿಕಾರ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO, ಜಿಲ್ಲಾ ಪಂಚಾಯತಿ) 

₹25 ಲಕ್ಷಕ್ಕೂ ಮೇಲ್ಪಟ್ಟು 

ಟೆಂಡರ್ ಮೇಲ್ಮನವಿ ಪ್ರಾಧಿಕಾರ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO, ಜಿಲ್ಲಾ ಪಂಚಾಯತಿ) 

₹25 ಲಕ್ಷಗಳವರೆಗೆ 

ಟೆಂಡರ್ ಮೇಲ್ಮನವಿ ಪ್ರಾಧಿಕಾರ

ಆಯುಕ್ತರು (ಪಂಚಾಯತ್ ರಾಜ್) 

₹1.00 ಕೋಟಿಗಳವರೆಗೆ 

ಟೆಂಡರ್ ಮೇಲ್ಮನವಿ ಪ್ರಾಧಿಕಾರ

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ 

₹1.00 ಕೋಟಿಗಳ ಮೇಲ್ಪಟ್ಟು 

ಗ್ರಾಮ ಪಂಚಾಯತಿ ಮಟ್ಟದ ಟೆಂಡರ್ ಅನುಮೋದನೆಯನ್ನು ಆಡಳಿತ ಮಂಡಳಿಯಿಂದ ಪಡೆದು, ತಾಂತ್ರಿಕವಾಗಿ ಇ-ಸಂಗ್ರಹಣಾ ತಂತ್ರಾಂಶದಲ್ಲಿ ಡಿಜಿಟಲ್ ಕೀ ಬಳಸಲು ಪಿಡಿಓಗಳಿಗೆ ಅನುಮತಿ ನೀಡಲಾಗಿದೆ.

No comments:

Post a Comment