Letter No: PDOBGRADE/5th Pay SFC/2024-25/82 Date: 22.01.2025
ಗೌರವಾನ್ವಿತ ಅಧ್ಯಕ್ಷರು, 5 ನೇ ಎಸ್.ಎಫ್.ಸಿ
5ನೇ ರಾಜ್ಯ ಹಣಕಾಸು
ಆಯೋಗ
2ನೇ ಮಹಡಿ, ಪೂರ್ವ
ಪ್ರವೇಶ
ದ್ವಾರ,
ಖನಿಜಾ ಭವನ,
ರೇಸ್ ಕೋರ್ಸ್
ರಸ್ತೆ,
ಬೆಂಗಳೂರು – 560001
ಮಾನ್ಯರೇ
ವಿಷಯ |
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯ
ಹೆಸರನ್ನು ಮರುಪದನಾಮೀಕರಿಸುವ ಕುರಿತು ಮನವಿ |
ಉಲ್ಲೇಖ |
ತಮ್ಮ ಕಛೇರಿಯ ಪತ್ರ ಸಂಖ್ಯೆ:SFC/ADMN/GEN/2024(110130)/D-10 Date:18.01.2025. |
**********
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ
2010-11ನೇ ಸಾಲಿನಿಂದ ರಾಜ್ಯ ಸರ್ಕಾರವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು, ಕಂದಾಯ ಇಲಾಖೆಯ ಉಪ ತಹಶೀಲ್ದಾರರ ಹುದ್ದೆಗೆ ಸರಿ ಸಮನಾಗಿ ಸೃಜನೆ ಮಾಡಿರುತ್ತದೆ, ಸದರಿ ಹುದ್ದೆಯು
2010-11ನೇ ಸಾಲಿನಿಂದ ಪ್ರಸ್ತುತದವೆರೆಗೂ ಸಾಕಷ್ಟು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿಂದ ಹೆಸರು ಪಡೆದಿದೆ ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ “ಗ್ರಾಮ ಲೆಕ್ಕಾಧಿಕಾರಿ” ಹುದ್ದೆಯನ್ನು ರಾಜ್ಯ ಸರ್ಕಾರವು 2022-23ನೇ ಸಾಲಿನಿಂದ “ಗ್ರಾಮ ಆಡಳಿತಾಧಿಕಾರಿ” ಎಂದು ಮರು ನಾಮಕರಿಸಲಾಗಿರುತ್ತದೆ
ಹಾಗೂ ಈ ಹುದ್ದೆಯು 12ನೇ ತರಗತಿ ವಿದ್ಯಾರ್ಹತೆ ಹೊಂದಿದೆ, ಸದರಿ ಹುದ್ದೆಯು ಮರು ಪದನಾಮಕರಿಸಿದ ನಂತರ ಗ್ರಾಮ ಲೆಕ್ಕಾಧಿಕಾರಿಗಳಲ್ಲಿ ಸಾಕಷ್ಟು ಚೈತನ್ಯವನ್ನು ಉಂಟು ಮಾಡಿದ್ದು ಆಡಳಿತ ವ್ಯವಸ್ಥೆಯಲ್ಲಿ ಒಂದು ಹೊಸತನದ ಗುರುತನ್ನು
ಮೂಡಿಸಿದೆ.
ಪ್ರಯುಕ್ತ ಇದೇ ಮಾದರಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಮರುಪದನಾಮೀಕರಿಸುವುದರಿಂದ 15 ವರ್ಷಗಳಿಂದ ಸೂಕ್ತ ಬಡ್ತಿ ಇಲ್ಲದೆ
ಇರುವ ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹೆಸರು ಬದಲಾವಣೆ ಧನಾತ್ಮಕವಾಗಿ ಆಡಳಿತದಲ್ಲಿ
ಭಾಗವಹಿಸಲು ಸಹಕಾರಿಯಾಗುತ್ತದೆ.
ಮುಂದುವರೆದು ಕಾರ್ಯನಿರ್ವಾಹಕ
ಅಧಿಕಾರಿ ಹುದ್ದೆ ತಾಲ್ಲೂಕು ಪಂಚಾಯಿತಿ /Taluk
Panchayth Executive Officer (EO), / ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು/ Chief Executive Officer (CEO) ಜಿಲ್ಲಾ ಪಂಚಾಯಿತಿಯಲ್ಲಿರುವಂತೆ, ಇದೇ ಮಾದರಿಯಲ್ಲಿ ಈ
ಎಲ್ಲಾ ಹುದ್ದೆಗಳ ಪದನಾಮಕ್ಕೆ ಅನುಗುಣವಾಗಿ "ಗ್ರಾಮ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ”/Grama Panchayath Executive Officer (GEO)" ಮರುಪದನಾಮಕರಿಸಬೇಕು,
ಇದರಿಂದ ಈ ಕೆಳಗಿನಂತೆ ಆಡಳಿತಾತ್ಮಕ ಅನುಕೂಲತೆಗಳು
ಇಲಾಖೆಗೆ ಲಭಿಸುತ್ತವೆ:
1.
ಗ್ರಾ.ಪಂ
ಕಾರ್ಯನಿರ್ವಾಹಕ ಅಧಿಕಾರಿ ಮರುಪದನಾಮೀಕರಿಸಿದಲ್ಲಿ ಈ ಹೆಸರಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು,
ಹೋಬಳಿ ಮಟ್ಟದ ಅಧಿಕಾರಿಗಳೊಂದಿಗೆ ಸೂಕ್ತ ರೀತಿಯಲ್ಲಿ ಸಮನ್ವಯತೆ ಸಾಧಿಸಲು ಹಾಗೂ ಕೆ.ಡಿ.ಪಿ ತ್ರೈಮಾಸಿಕ ಸಭೆಗಳನ್ನು ಏರ್ಪಡಿಸಲು, ಆಡಳಿತಾತ್ಮಕವಾಗಿ ಈ
ಹೆಸರು ಪ್ರಭಾವ ಬೀರುತ್ತದೆ.
2.
ಇತ್ತಿಚಿನ
ದಿನಗಳಲ್ಲಿ ಗ್ರಾಮ ಪಂಚಾಯಿತಿಗಳು ಕೇವಲ ಅಭಿವೃದ್ಧಿ
ಕೆಲಸ ಕೈಗೊಳ್ಳುವುದಕ್ಕೆ ಮಾತ್ರ ಸಿಮಿತವಾಗಿರುವುದೆಯೇ, ಕೆಡಿಪಿ ಸಭೆಗಳನ್ನು ಕರೆಯುವುದು,
ಶಾಲಾ ಬಿಟ್ಟು ಮಕ್ಕಳ ಸಭೆ ಆಯೋಜನೆ ಉಪ-ನಿಯಮಗಳನ್ನು ರಚಿಸುವುದು ಜಾರಿಗೊಳಿಸುವುದು, ಸಾರ್ವಜನಿಕರ
ಕಲ್ಯಾಣಕ್ಕೆ ಅಗತ್ಯವಾದ ಆದೇಶಗಳನ್ನು ಹೊರಡಿಸುವುದು ಸೇರಿದಂತೆ ಕಾರ್ಯನಿರ್ವಾಹಕ ಚಟುವಟಕೆಗಳು ಮಾಡುತ್ತಿದ್ದು
ಇವುಗಳಿಗೆ ಅನುಗುಣವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆ ಹೆಸರು ಬದಲಿಸುವುದು ಅಗತ್ಯವಾಗಿದೆ.
3.
ಗ್ರಾಮೀಣಾಭಿವೃದ್ಧಿ
ಎನ್ನುವ ಅಂಶವು ಅಭಿವೃದ್ಧಿ ಹೆಸರನ್ನು ಒತ್ತುಕೊಟ್ಟರೆ ಪಂಚಾಯತ್ ರಾಜ್ ಎನ್ನುವುದು ಎಕ್ಸಕ್ಯೂಟಿವ್
ಬಿಂಬಿಸುವುದರಿಂದ ಇವುಗಳಿಗೆ ಅನುಗುಣವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆ ಹೆಸರು ಪ್ರಸಕ್ತ
ಕಾಲಘಟ್ಟಕ್ಕೆ ಸೂಕ್ತವಾಗುವುದಿಲ್ಲ.
4.
ಗ್ರಾಮ
ಪಂಚಾಯಿತಿ ಗ್ರಂಥಾಲಯಗಳು ಅರಿವು ಕೇಂದ್ರಗಳಾಗಿ
ಹೆಸರು ಬದಲಾಗಿವೆ, ಪಂಚಾಯತ್ ಮಟ್ಟದಲ್ಲಿ ಅಂಗನವಾಡಿ
ಮಾದರಿಯಲ್ಲಿಯೇ ಕೂಸಿನ ಮನೆ ಎಂದು ನವೀನ
ಹೆಸರು ನೀಡಲಾಗಿದೆ, ಇವುಗಳಂತಯೇ ಗ್ರಾಮ ಪಂಚಾಯಿತಿಯ ಕಾರ್ಯಗಳು ಮತ್ತು ಕರ್ತವ್ಯಗಳಿಗೆ ಅನುಗುಣವಾಗಿ
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೆಸರನ್ನು ಬದಲಿಸಬೇಕಿದೆ.
5.
ಒಡಿಸ್ಸಾ ರಾಜ್ಯದಲ್ಲಿ
Panchayath Executive Officer (PEO) ಹುದ್ದೆಯು ಈಗಾಗಲೇ ಅಸ್ತಿತ್ವದಲ್ಲಿರುವುದರಿಂದ ಇದೇ
ಮಾದರಿಗೆ ಅನುಗುಣವಾಗಿ ಕರ್ನಾಟಕ ರಾಜ್ಯದಲ್ಲಿ ಸದರಿ ಪಂಚಾಯತ್ ಅಭಿವೃದ್ಧಿ
ಅಧಿಕಾರಿ ಹುದ್ದೆಯ ಹೆಸರು ಬದಲಾಗಿ ಜಿಇಓ ಎಂದು ಮರು ಪದನಾಮಕರಿಸುವುದು ಪ್ರಸ್ತುತ
ಕಾಲಘಟ್ಟಕ್ಕೆ ಸೂಕ್ತವಾಗಿದೆ.
ಈ ಮೇಲಿನ ಅಂಶಗಳ ಆಧಾರದಲ್ಲಿ ಸಂವಿಧಾನ 73ನೇ ತಿದ್ದುಪಡಿ ಆಶಯವನ್ನು ಸಕಾರಗೊಳಿಸಲು ಗ್ರಾಮೀಣಭಾಗದ ಅಭಿವೃದ್ಧಿಗೆ ಪೂರಕವಾಗುವ ಅಂಶಗಳನ್ನು ಆಧಾರಿಸಿ
ಪ್ರಸ್ತುತ ಈ ಹುದ್ದೆಯ ಹೆಸರು ಮರು ಪದನಾಮೀಕರಿಸಲು ಗೌರವಾನ್ವಿತ ಆಯೋಗವು ವರದಿಯಲ್ಲಿ ದಾಖಲಿಸಿ ಸರ್ಕಾರಕ್ಕೆ
ಸದರಿ ವಿಷಯನ್ನು ಆದ್ಯತೆ ಮೇಲೆ ಪರಿಗಣಿಸುವಂತೆ ಮಾಡಬೇಕೆಂದು ಈ ಮೂಲಕ ಕೋರುತ್ತೇನೆ.
ವಂದನೆಗಳೊಂದಿಗೆ.
ಸ್ಥಳ: ಬೆಂಗಳೂರು ಇಂತಿ
ತಮ್ಮ ವಿಶ್ವಾಸಿ!
No comments:
Post a Comment